ನೀರಾಜೆ ಮದ್ರಸದಲ್ಲಿ ವಿಶ್ವ ಪರಿಸರ ದಿನಾಚರಣೆ

0

ರಾಮಕುಂಜ: ನೀರಾಜೆ ನೂರುಲ್ ಹುದಾ ಮಸ್ಜಿದ್ ಮತ್ತು ಮದ್ರಸದಲ್ಲಿ ವಿಶ್ವ ಪರಿಸರ ದಿನಾಚರಣೆ ಅಭಿಯಾನ ಪ್ರಯುಕ್ತ ಎಸ್‌ಕೆಎಸ್‌ಬಿವಿ ನೀರಾಜೆ ಶಾಖೆ ಹಾಗೂ ಮದ್ರಸ ವಿದ್ಯಾರ್ಥಿಗಳಿಂದ ಗಿಡ ನಡೋಣ, ಹಸಿರು ಬೆಳಸೋಣ ಪರಿಸರ ಉಳಿಸೋಣ ಕಾರ್ಯಕ್ರಮ ಜೂ.7ರಂದು ನಡೆಯಿತು.


ಕಾರ್ಯಕ್ರಮದಲ್ಲಿ ಮದ್ರಸದ ಸದರ್ ಉಸ್ತಾದರಾದ ಕೆ.ಯು.ಶೌಕತ್ ಅಲಿ ಅಸ್ಲಮಿ, ಸಹ ಅಧ್ಯಾಪಕರಾದ ಫಾಳಿಲ್ ಫೈಝಿ,ಆಡಳಿತ ಸಮಿತಿಯ ಅಧ್ಯಕ್ಷರಾದ ಸಿದ್ದೀಕ್ ಎನ್., ಕಾರ್ಯದರ್ಶಿ ಪುತ್ತುಕುಂಞಿ, ಯಹ್ಕೂಬ್, ಎಸ್‌ಕೆಎಸ್‌ಬಿವಿ ಅಧ್ಯಕ್ಷ ಶಿಹಾಬುದ್ದೀನ್, ಕಾರ್ಯದರ್ಶಿ ಇಸ್ಮಾಯಿಲ್ ಅಫ್ಫಾಮ್, ಕೋಶಾಧಿಕಾರಿ ರಮೀಝ್, ಸಂಕಟನಾ ಕಾರ್ಯದರ್ಶಿ ಶರೀನ್, ಎಸ್‌ಕೆಎಸ್‌ಬಿವಿ ಪದಾಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here