ಕಬಕ:ಹಲ್ಲೆ ಪ್ರಕರಣದಲ್ಲಿ ವಕೀಲರ ಮೇಲೆ ಬಲವಂತದ ಕ್ರಮ ಕೈಗೊಳ್ಳದಂತೆ ಕೋರ್ಟ್ ಆದೇಶ

0

ಪುತ್ತೂರು:ಕಬಕ ವಿದ್ಯಾಪುರದಲ್ಲಿ ರಸ್ತೆಗೆ ಮಣ್ಣು ಹಾಕಿ ಸಂಚಾರಕ್ಕೆ ತೊಡಕು ಉಂಟಾಗಿರುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಹಲ್ಲೆ ಘಟನೆಗೆ ಸಂಬಂಧಿಸಿ ವಕೀಲರೋರ್ವರ ಸಹಿತ ಇತ್ತಂಡದ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣದಲ್ಲಿ ಆರೋಪಿಯಾಗಿರುವ ವಕೀಲರೊಬ್ಬರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪುತ್ತೂರು ಜಿಲ್ಲಾನ್ಯಾಯಾಲಯ ಡಿವೈಎಸ್ಪಿಯವರಿಗೆ ಆದೇಶ ನೀಡಿದೆ.


ಪ್ರಕರಣದಲ್ಲಿ ವಿದ್ಯಾಪುರ ನಿವಾಸಿಗಳಾದ ರಿಯಾಜ್, ನ್ಯಾಯವಾದಿ ಆಶೀಕ್, ಇಲ್ಯಾಸ್, ಹಾಜೀರ ಮತ್ತು ಇನ್ನೊಂದು ಕಡೆ ವಿದ್ಯಾಪುರ ನಿವಾಸಿಗಳಾದ ಶಿವಕುಮಾರ್, ರಾಣಿ ಯಾನೆ ಭುವಿ, ಯಶೋದಾ ಅವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದಲ್ಲಿ ಆರೋಪಿಯಾಗಿರುವ ನ್ಯಾಯವಾದಿ ಆಶೀಕ್ ಅವರು ನಿರೀಕ್ಷಣಾ ಜಾಮೀನು ಕೋರಿ ವಕೀಲರಾದ ಜಿ.ಜಗನ್ನಾಥ ರೈ, ನೂರುದ್ದೀನ್ ಸಾಲ್ಮರ, ಮುಸ್ತಾಫ, ರಮೀಜ್, ರೆಹಮಾನ್ ಅವರ ಮೂಲಕ ಪುತ್ತೂರುನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.ಅರ್ಜಿಯ ಕುರಿತು ನ್ಯಾಯಾಲಯದಲ್ಲಿ ಅಂತಿಮ ತೀರ್ಪು ಬರುವ ತನಕ ಆರೋಪಿ ವಕೀಲರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಡಿವೈಎಸ್ಪಿ ಅವರಿಗೆ ಆದೇಶ ನೀಡಿದೆ ಎಂದು ವಕೀಲ ನೂರುದ್ದೀನ್ ಸಾಲ್ಮರ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here