ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್, ವಿವಿಧ ಸಂಘಗಳ ಉದ್ಘಾಟನೆ

0

ಪಠ್ಯದಂತೆ ಪಠ್ಯೇತರ ಚಟುವವಟಿಕೆಯಲ್ಲಿಯೂ ತೊಡಗಿಸಿಕೊಳ್ಳಿ-ಡಾ.ಪ್ರದೀಪ್ ಕೋಟೆಕಲ್

ಪುತ್ತೂರು: ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತಿನ ವಿವಿಧ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧನೆ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿವಿಧ ಸಂಘಗಳ ಹೆಸರುಗಳನ್ನೊಳಗೊಂಡ ಫಲಕವನ್ನು ಅತಿಥಿಗಳು ಅನಾವರಣಗೊಳಿಸಿ ಕಾರ್ಯಕ್ರಮ ಉದ್ಘಾಟಿಸಿದರು.


ಮುಖ್ಯಅತಿಥಿ, ಡಾ.ಪ್ರದೀಪ್ ಕೋಟೆಕಲ್ ಮಾತನಾಡಿ ನೀವು ಯಾವ ಶಾಲೆಯಲ್ಲಿ ಕಲಿಯುತ್ತೀರಿ ಅಲ್ಲಿಯ ಪಠ್ಯೇತರ ಚಟುವವಟಿಕೆಯಲ್ಲಿ ತೊಡಗಿಸಿಕೊಳ್ಳಿ, ಉತ್ತಮ ಆರೋಗ್ಯದೆಡೆ ಗಮನವಿರಲಿ ಎಂಬ ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕರಾದ ವಂ.ಮ್ಯಾಕ್ಸಿಮ್ ಡಿಸೋಜ ಮಾತನಾಡಿ ನಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಅಂತೆಯೇ ಕ್ರಿಯಾಶೀಲರಾಗಬೇಕು. ತಮ್ಮ ಕರ್ತವ್ಯವನ್ನು ಅರಿತು ಶಾಲಾ ಸಂಸತ್ತಿನ ಸದಸ್ಯರುಗಳು ಮತ್ತು ವಿದ್ಯಾರ್ಥಿಗಳು ಪರಸ್ಪರ ಹೊಂದಾಣಿಕೆಯಿಂದ ಇದ್ದು ಶಾಲಾ ಶಿಸ್ತು ಮತ್ತು ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು. ಶಾಲಾ ವಿದ್ಯಾರ್ಥಿ ನಾಯಕ ಅನ್ವಿತ್ ಬಿ.ಕೆ. ಮತ್ತು ಉಪನಾಯಕಿ ಖದೀಜತ್ ಲಿಬಾರವರು ಸಂದರ್ಭೋಚಿತವಾಗಿ ಮಾತನಾಡಿದರು. ರಕ್ಷಕ- ಶಿಕ್ಷಕ ಸಂಘದ ಉಪಾಧ್ಯಕ್ಷ ಇಸ್ಮಾಯಿಲ್ ಬೊಳುವಾರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಕುಮಾರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಮುಖ್ಯ ಅತಿಥಿ, ಶಾಲೆಯ ಹಿರಿಯ ವಿದ್ಯಾರ್ಥಿ ಡಾ. ಪ್ರದೀಪ್ ಕೋಟೆಕಲ್‌ರವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಶಿಕ್ಷಕಿ ಮೋಲಿ ಸನ್ಮಾನಿತರ ಬಗ್ಗೆ ಮಾತನಾಡಿದರು.
ಮುಖ್ಯಗುರುಗಳು ಸಂಸತ್ತಿನ ಸದಸ್ಯರುಗಳಿಗೆ ಪ್ರತಿಜ್ಞಾವಿದಿ ಬೋಧಿಸಿದರು. ನೂತನವಾಗಿ ಆರಿಸಲ್ಪಟ್ಟ ಶಾಲಾ ವಿದ್ಯಾರ್ಥಿ ಸಂಸತ್ತಿನ ಸದಸ್ಯರುಗಳಿಗೆ ಪದನಾಮಕ್ಕನುಗುಣವಾಗಿ ಹೆಗಲಪಟ್ಟಿ ನೀಡಲಾಯಿತು. ಶಿಕ್ಷಕಿ ಆಶಾ ಗ್ರಾಹಕ ಸಂಘ, ಸಾಂಸ್ಕೃತಿಕ ಸಂಘ, ಪರಿಸರ ಸಂಘ, ವಿಜ್ಞಾನ ಸಂಘ, ಗಣಿತ ಸಂಘ, ಚುನಾವಣಾ ಜಾಗೃತಿ ಸಂಘ, ಕ್ರೀಡಾ ಸಂಘ ಮತ್ತು ಚಿತ್ರಕಲಾ ಸಂಘಗಳ ಮಾರ್ಗದರ್ಶಕ ಶಿಕ್ಷಕರ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳ ಪರಿಚಯ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕ ನರೇಶ್ ಲೋಬೊ ಮಂತ್ರಿಮಂಡಲದ ಸದಸ್ಯರ ಪರಿಚಯ ಮಾಡಿದರು. ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶಿಕ್ಷಕಿ ರೇಷ್ಮಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜರೀನ ಪಿ.ಜೆ. ವಂದಿಸಿದರು. ಮರಿಯಮ್ ವಿಜ್ದಾನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here