






ಉಪ್ಪಿನಂಗಡಿ: ಇಲ್ಲಿನ ನಾಡಕಚೇರಿ ಹಾಗೂ ಮಳೆ ಮಾಪನ ಕೇಂದ್ರದ ಮತ್ತು ಉಪ್ಪಿನಂಗಡಿ ಅಂಗನವಾಡಿ ಕೇಂದ್ರದ ಮೇಲೆ ಬೀಳುವ ಸ್ಥಿತಿಯಲ್ಲಿದ್ದ ಮರದ ಗೆಲ್ಲುಗಳನ್ನು ಉಪ್ಪಿನಂಗಡಿ ಗೃಹ ರಕ್ಷಕದಳದ ಪ್ರವಾಹ ರಕ್ಷಣಾ ತಂಡವು ತೆರವುಗೊಳಿಸಿತು.



ಉಪ್ಪಿನಂಗಡಿ ಹೋಬಳಿಯ ಉಪ ತಹಶೀಲ್ದಾರ್ ಶ್ರೀಮತಿ ಕವಿತಾ ಅವರ ಆದೇಶದಂತೆ ನಡೆದ ಈ ತೆರವು ಕಾರ್ಯಾಚರಣೆಯಲ್ಲಿ ಗೃಹ ರಕ್ಷಕದಳದ ಘಟಕಾಧಿಕಾರಿ ರಾಮಣ್ಣ ಆಚಾರ್ಯ, ಎಸ್ಎಲ್ ದಿನೇಶ, ಎಎಸ್ಎಲ್ ಜನಾರ್ದನ ಆಚಾರ್ಯ, ಸೋಮನಾಥ, ವಸಂತ, ಸಮದ್, ಶಿಭುಜಾನ್, ವಸಂತ ಹಾಗೂ ಗ್ರಾಮ ಸಹಾಯಕ ಯತೀಶ್ ಭಾಗವಹಿಸಿದರು.












