






ಪುತ್ತೂರು: ನೆಲ್ಲಿಕಟ್ಟೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ.20ರಂದು ವಿಶೇಷ ಚೇತನ ಮಕ್ಕಳೊಂದಿಗೆ ‘ಸಂಭ್ರಮ ಶನಿವಾರ’ ಕಾರ್ಯಕ್ರಮ ಹಾಗೂ ಮದ್ಯ-ಮಾದಕ ವಸ್ತುಗಳ ವಿರುದ್ಧ ನಶ ಮುಕ್ತ ಅಭಿಯಾನ ಪ್ರತಿಜ್ಞಾ ವಿಧಿ ಕಾರ್ಯಕ್ರಮ ನಡೆಯಿತು.



ಪುತ್ತೂರು ತಾಲೂಕು ಪಂಚಾಯತ್ ವಿಕಲ ಚೇತನರ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ಅವರು ವಿಕಲ ಚೇತನರ ಇಲಾಖೆ ಯೋಜನೆಗಳು, ವಿಶಿಷ್ಟ ಗುರುತು ಚೀಟಿ, ನಿರಾಮಯ ಯೋಜನೆ, 21 ವಿಧಗಳ ವಿಕಲ ಚೇತನರ ಮಾಹಿತಿ ಹಾಗೂ 2016ರ ವಿಕಲ ಚೇತನರ ಅಧಿನಿಯಮದ ಬಗ್ಗೆ ಮಾಹಿತಿ ನೀಡಿದರು.



ಅತಿಥಿ ಶಿಕ್ಷಕಿ ಶ್ಯಾಮಿಲಿ ಅವರು ಮಕ್ಕಳಿಗೆ ನಶ ಮುಕ್ತ ಅಭಿಯಾನದ ಬಗ್ಗೆ ಅರಿವು ಮೂಡಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು. ವಿಕಲ ಚೇತನರ ಇಲಾಖೆ ನಿರ್ದೇಶಕರ ನಶ ಮುಕ್ತ ಅಭಿಯಾನದ ಆದೇಶ ಮತ್ತು ಕೈಪಿಡಿಯನ್ನು ಮುಖ್ಯ ಗುರು ಯಶೋಧ ವೈ ಅವರಿಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಯಶೋಧ ವೈ, ಅತಿಥಿ ಶಿಕ್ಷಕಿ ಶ್ಯಾಮಿಲಿ, ಸಹ ಶಿಕ್ಷಕಿ ರಾಜೇಶ್ವರಿ, ಪುತ್ತೂರು ನಗರಸಭೆ ನಗರ ಪುನರ್ವಸತಿ ಕಾರ್ಯಕರ್ತೆ ಉಮಾವತಿ, ನವೀನ್ ಕುಮಾರ್ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.










