5 ದಿನಗಳ ಮಾದಕ ದ್ರವ್ಯ ವಿರೋಧಿ ಅಭಿಯಾನ: ಪುತ್ತೂರಿನಲ್ಲಿ ಜೂ.22ಕ್ಕೆ ಆರಂಭ

0

ಜೂ.26ಕ್ಕೆ ಪುತ್ತೂರಿನಲ್ಲಿ 5ಕೆ ರನ್ ಮ್ಯಾರಥಾನ್ – ಉಚಿತ ನೋಂದಾವಣೆ

ಪುತ್ತೂರು: ಅಂತರರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆಯ ಅಂಗವಾಗಿ, ಪುತ್ತೂರು ಉಪವಿಭಾಗದ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಪುತ್ತೂರಿನ ಎಲ್ಲಾ ರೋಟರಿ ಸಂಸ್ಥೆಗಳು, ಲಯನ್ಸ್ ಕ್ಲಬ್‌ಗಳು, ಇನ್ನರ್ ವೀಲ್ ಕ್ಲಬ್, ರೋಟರಾಕ್ಟ್ ಕ್ಲಬ್, ಜೆಸಿಐ ಸಂಸ್ಥೆ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಭಾರತ್ ಸ್ಕೌಟ್ಸ್ & ಗೈಡ್ಸ್, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಇತರ ವಿವಿಧ ಸಾಮಾಜಿಕ ಮತ್ತು ಸೇವಾ ಸಂಘ, ಸಂಸ್ಥೆಗಳ ಸಹಕಾರದೊಂದಿಗೆ ಜೂ.22ರಿಂದ 26ರವರೆಗೆ ಮಾದಕ ದ್ರವ್ಯ ವಿರೋಧಿ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪುತ್ತೂರು ಡಿವೈಎಸ್ಪಿ ಪ್ರಮೋದ್ ಕುಮಾರ್ ಬಿ ಅವರು ತಿಳಿಸಿದ್ದಾರೆ.


ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ಜೂ.22 ರಂದು ಬೆಳಿಗ್ಗೆ ಗಂಟೆ 9.೦೦ ನೆಹರುನಗರ ಸುದಾನ ವಸತಿಯುತ ಶಾಲಾ ಆವರಣದಲ್ಲಿ ನಡೆಯಲಿದೆ. ಬೀದಿ ನಾಟಕಕ್ಕೆ ಚಾಲನೆ ನೀಡುವ ಮೂಲಕ ಜಾಗೃತಿ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗುವುದು. ರೋಟರಿ ಕ್ಲಬ್ ಎಲೈಟ್, ಪುತ್ತೂರು ವತಿಯಿಂದ ಕಲಾವಿದ ಹಾಗೂ ಪತ್ರಕರ್ತ ಮೌನೇಶ್ ವಿಶ್ವಕರ್ಮ ಅವರ ನಿರ್ದೇಶನದಲ್ಲಿ ಸಿದ್ಧಗೊಂಡಿರುವ ಬೀದಿ ನಾಟಕವು ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಪ್ರದರ್ಶನ ನೀಡಲಾಗುವುದು. ಜಾಗೃತಿ ಅಭಿಯಾನದಲ್ಲಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಸರಕಾರಿ ಇಲಾಖೆಗಳು, ಸಾಮಾಜಿಕ ಹಾಗೂ ಸೇವಾ ಸಂಘ,ಸಂಸ್ಥೆಗಳು, ಯುವ ಸಂಘಟನೆಗಳು ಮತ್ತು ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಲಿದ್ದು, ಬೀದಿ ನಾಟಕ, ಜಾಗೃತಿ ರ‍್ಯಾಲಿ, ಪ್ರತಿಜ್ಞಾ ಸ್ವೀಕಾರ ಹಾಗೂ ವಿವಿಧ ಸ್ಪರ್ಧೆಗಳ ಮೂಲಕ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಸಮಾಜವನ್ನು ಮಾದಕ ದ್ರವ್ಯಗಳ ಹಾವಳಿಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಸಂಘ, ಸಂಸ್ಥೆಗಳು ಹಾಗೂ ಸಾರ್ವಜನಿಕರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಜೂ.26ಕ್ಕೆ 5ಕೆ ರನ್ ಮ್ಯಾರಥಾನ್
ಮಾದಕ ದ್ರವ್ಯ ದುಷ್ಪರಿಣಾಮ ಮತ್ತು ತಡೆಗಟ್ಟುವಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ 5ಕೆ ರನ್ ಮ್ಯಾರಥಾನ್ ಜೂ. 26ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಿಂದ ಆರಂಭಗೊಳ್ಳಲಿದೆ. ಬೆಳ್ತಂಗಡಿ, ಸುಳ್ಯ, ಪುತ್ತೂರು, ಹಾಗು ಕಡಬ ತಾಲೂಕಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗು ಸಾರ್ವಜನಿಕರು ಮ್ಯಾರಾಥನ್‌ನಲ್ಲಿ ಭಾಗವಹಿಸಬಹದು. ಉಚಿತ ನೋಂದಾವಣೆ ಮಾಡಲಾಗುವುದು. ಭಾಗವಹಿಸುವವರು ಆಯಾ ಪೊಲಸ್ ಠಾಣೆಗಳಲ್ಲಿ ನೋಂದಾವಣೆ ಮಾಡಿಕೊಳ್ಳಬಹುದು. ಇದರ ಜೊತೆಗೆ ಗೋಗಲ್ ಫಾರ್ಮ್‌ನಲ್ಲೂ ನೋಂದಾವಣೆ ಮಾಡಿಕೊಳ್ಳಬಹುದು. 18 ವರ್ಷದ ಒಳಗಿನ ಶಾಲಾ ಕಾಲೇಜು ವಿದ್ಯಾರ್ಥಿಗಳು, 18 ರಿಂದ 50 ವರ್ಷದ ಸಾರ್ವಜನಿಕರು ಮತ್ತು 50 ಮೇಲ್ಪಟ್ಟವರಿಗೂ ಅವಕಾಶವಿದ್ದು, ಮಹಿಳೆಯರು ಪುರುಷರು ಭಾಗವಹಿಸುವಬಹುದು. ಎಲ್ಲಾ ಸಾರ್ವಜನಿಕರು, ವಿವಿಧ ಸಂಘ ಸಂಸ್ಥಗಳು ಮಾದಕ ದ್ರವ್ಯ ದುಷ್ಪರಿಣಾಮ ಮತ್ತು ತಡೆಗಟ್ಟುವಲ್ಲಿ ಸಕ್ರಿಯರಾಗಿ ಭಾಗವಹಿಸಿ ಯುವಜನತೆ ಮತ್ತು ವಿದ್ಯಾರ್ಥಿಗಳಿಗೆ ಮಾದಕ ವ್ಯಸನಗಳಿಂದ ಜಾಗೃತಿ ಮೂಡಿಸುವ ಪವಿತ್ರವಾದ ಕೆಲಸ ಮತ್ತು ದೇಶ ಕಟ್ಟುವ ಕೆಲಸದಲ್ಲಿ ಎಲ್ಲರು ಭಾಗವಹಿಸಿ. ಮ್ಯಾರಥಾನ್ ಜೂ.26ರಂದು ಬೆಳಗ್ಗೆ ಮಹತೊಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಿಂದ ಹೊರಟು ಆದರ್ಶ ಆಸ್ಪತ್ರೆಯ ಬಳಿಯಿಂದ ಅರುಣಾ ಕಲಾಮಂದಿರ ರಸ್ತೆಯಾಗಿ ದರ್ಬೆ, ಕ್ಯಾಂಪ್ಕೋ ಚಾಕಲೇಟ್ ಪ್ಯಾಕ್ಟರಿ ಬಳಿಯಿಂದ ಯು ಟರ್ನ್ ಹೊಡೆದು ಪುನಃ ಮುಖ್ಯರಸ್ತೆಯಾಗಿ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಬಳಿಯಿಂದ ದೇವಳದ ಗದ್ದೆಯಲ್ಲಿ ಸಮಾಪನಗೊಳ್ಳಲಿದೆ. ಗೋಗಲ್ ಫಾರ್ಮ್‌ಗಾಗಿ [email protected] ಪುತ್ತೂರು ಪೊಲೀಸ್ ಉಪವಿಭಾಗವನ್ನು ಸಂಪರ್ಕಿಸಬಹುದು.
ಪ್ರಮೋದ್ ಕುಮಾರ್
ಬಿ ಡಿವೈಎಸ್ಪಿ ಪುತ್ತೂರು ಉಪವಿಭಾಗ

LEAVE A REPLY

Please enter your comment!
Please enter your name here