ಜನ ಜಾಗೃತಿ ವೇದಿಕೆಯ ಬೆಟ್ಟಂಪಾಡಿ ವಲಯದ ನೂತನ ಸಮಿತಿ ರಚನೆ

0

ಅಧ್ಯಕ್ಷರಾಗಿ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು, ಉಪಾಧ್ಯಕ್ಷರಾಗಿ ಪ್ರಕಾಶ್ ರೈ ಬೈಲಾಡಿ, ಕೋಶಾಧಿಕಾರಿಯಾಗಿ ಬಾಬು ರೈ ಕೋಟೆ ಆಯ್ಕೆ

ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಜನ ಜಾಗೃತಿ ವೇದಿಕೆ  ಬೆಟ್ಟಂಪಾಡಿ ವಲಯದ ನೂತನ  ಸಮಿತಿಯ ಪದಾಧಿಕಾರಿಗಳ ಆಯ್ಕೆ ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಂಗಣದಲ್ಲಿ ಜೂ.15 ರಂದು ನಡೆಯಿತು.

ಸಮಿತಿಯ ನೂತನ ಅಧ್ಯಕ್ಷರಾಗಿ ನಾರಾಯಣ ಪ್ರಕಾಶ್ ನೆಲ್ಲೆತ್ತಿಮಾರು , ಉಪಾಧ್ಯಕ್ಷರಾಗಿ  ಪ್ರಕಾಶ್ ರೈ ಬೈಲಾಡಿ,  ಕೋಶಾಧಿಕಾರಿಯಾಗಿ  ಬಾಬು ರೈ ಕೋಟೆ ಇವರನ್ನು ಆಯ್ಕೆ ಮಾಡಲಾಯಿತು.ಸಮಿತಿಯ ಕಾರ್ಯದರ್ಶಿಯಾಗಿ ವಲಯ ಮೆಲ್ವೀಚಾರಕ ಆದರ್ಶ್ ಇವರು ಕರ್ತವ್ಯ ನಿರ್ವಹಿಸುವರು.

 ನವಜೀವನ ಸಮಿತಿಯ ಬೆಟ್ಟಂಪಾಡಿ ವಲಯಾಧ್ಯಕ್ಷರಾಗಿ  ಜತ್ತಪ್ಪ ಗೌಡ ಇವರು ಆಯ್ಕೆ ಆಗಿರುತ್ತಾರೆ. ಒಕ್ಕೂಟದ ವಲಯಾಧ್ಯಕ್ಷ  ಬಾಲಕೃಷ್ಣ,  ತಾಲೂಕು ಜನಜಾಗೃತಿ ಸದಸ್ಯರು, ನವ ಜೀವನ ಸಮಿತಿ ಸದಸ್ಯರು.ಒಕ್ಕೂಟದ ಅಧ್ಯಕ್ಷರು, ವಲಯದ ಸೇವಾ ಪ್ರತಿನಿಧಿಗಳು ಭಾಗವಹಿಸಿದರು.   ಗೋಪಾಲ ಪ್ರಾರ್ಥಿಸಿ, ಸೇವಾ ಪ್ರತಿನಿಧಿ ಜಯಶ್ರೀ. ಡಿ ವಂದಿಸಿದರು. ಸೇವಾ ಪ್ರತಿನಿಧಿ ಜಗನ್ನಾಥ ಪಾಟಾಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here