







ಪುತ್ತೂರು: ಕುಂಬ್ರದ ಮುಖ್ಯ ಕೇಂದ್ರದಲ್ಲಿರುವ ಕುಂಬ್ರ ಸೆಂಟರ್ ಕಟ್ಟಡದಲ್ಲಿ ಜು. 6ರಂದು ಉದ್ಘಾಟನೆಗೊಳ್ಳಲಿರುವ ಗೃಹೋಪಯೋಗಿ ವಸ್ತುಗಳು ಮತ್ತು ವಿದ್ಯುನ್ಮಾನ ಉಪಕರಣಗಳ ಬೃಹತ್ ಮಳಿಗೆಯಾದ ‘ಎಚ್.ಎಂ. ಹೋಮ್ ಅಪ್ಲೈಯನ್ಸಸ್ ಅಂಡ್ ಎಲೆಕ್ಟ್ರಾನಿಕ್ಸ್’ ಸಂಸ್ಥೆಗೆ ಅಂತರಾಷ್ಟ್ರೀಯ ವಾಗ್ಮಿ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಅವರು ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿ ಶುಭ ಹಾರೈಸಿದರು.


ಅದೇ ರೀತಿ, ಮೌಲಾನಾ ಪೇರೋಡ್ ಉಸ್ತಾದರು ಕೂಡ ಮಳಿಗೆಗೆ ಭೇಟಿ ನೀಡಿ, ಸಂಸ್ಥೆಯು ಯಶಸ್ವಿಯಾಗಲಿ ಎಂದು ಹಾರೈಸಿ ಆಶೀರ್ವಚನ ನೀಡಿದರು.




ಕುಂಬ್ರದ ಪ್ರಮುಖ ಭಾಗದಲ್ಲಿ ಗ್ರಾಹಕರಿಗೆ ಅತ್ಯಾಧುನಿಕ ಗೃಹೋಪಯೋಗಿ ವಸ್ತುಗಳು ಮತ್ತು ವಿದ್ಯುನ್ಮಾನ ಉಪಕರಣಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಈ ಮಳಿಗೆಯು ಆರಂಭಗೊಳ್ಳುತ್ತಿದೆ. ಸಂಸ್ಥೆಯು ಜುಲೈ 6ರಂದು ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದ್ದು, ಕುಂಬ್ರ ಮತ್ತು ಸುತ್ತಮುತ್ತಲ ಜನರಿಗೆ ಅತ್ಯುತ್ತಮ ಗುಣಮಟ್ಟದ ಸೇವೆ ನೀಡಲು ಸಜ್ಜಾಗಿದೆ.











