







ಪರ ಊರಿನಲ್ಲಿರುವ ಪುತ್ತೂರಿನವರು


ಪುತ್ತೂರು: ಪುತ್ತೂರು ಅಂಚೆ ಕಚೇರಿಯ ನಿವೃತ್ತ ಸಹಾಯಕ ಪೋಸ್ಟ್ ಮಾಸ್ಟರ್, ಸಾಮೆತ್ತಡ್ಕ ನಿವಾಸಿ ಚಾರ್ಲ್ಸ್ ಫುರ್ಟಾಡೊ ಹಾಗೂ ಎಸ್ಬಿಎಂ ನಿವೃತ್ತ ಸಿಬ್ಬಂದಿ ಮೆಟಿಲ್ಡಾ ಫುರ್ಟಾಡೊ ದಂಪತಿಯ ಪುತ್ರಿ ಕ್ಯಾರಲ್ ಶರ್ಲಿ ಫುರ್ಟಾಡೊರವರಿಗೆ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಫಿಲಾಸಫಿ (ಪಿ.ಎಚ್.ಡಿ) ಪದವಿ ನೀಡಿ ಗೌರವಿಸಿದೆ.



ಮಹಾರಾಷ್ಟ್ರದ ಅಹಿಲ್ಯಾನಗರದ ಅಹ್ಮದ್ನಗರ್ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣೆ ವಿಭಾಗದ ಪ್ರೊ.ನೋಯೆಲ್ ಪಾರ್ಗೆ ಅವರ ಮಾರ್ಗದರ್ಶನದಲ್ಲಿ “A Study of Work-Life Balance of Female Teachers Working in Private Educational Institutions of Ahmednagar District” ಎಂಬ ಮಹಾಪ್ರಬಂಧಕ್ಕೆ ಡಾ.ಕ್ಯಾರಲ್ ಫುರ್ಟಾದೋರವರಿಗೆ ಈ ಪದವಿ ಲಭಿಸಿದೆ.

ಡಾ.ಕ್ಯಾರಲ್ ಫುರ್ಟಾದೋರವರು 2006ರಲ್ಲಿ ಸಂತ ಫಿಲೋಮಿನಾ ಕಾಲೇಜಿನಿಂದ ಬ್ಯಾಚುಲರ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ (ಬಿಬಿಎಂ) ಪದವಿ, 2009ರಲ್ಲಿ ಬೆಂಗಳೂರಿನ ಸಂತ ಜೋಸೆಫ್ ವಾಣಿಜ್ಯ ಕಾಲೇಜಿನಿಂದ ಮಾಸ್ಟರ್ ಆಫ್ ಇಂಟರ್ನ್ಯಾಶನಲ್ ಬಿಸಿನೆಸ್ (ಎಂಐಬಿ) ಪದವಿ, 2016ರಲ್ಲಿ ಅಹ್ಮದ್ನಗರ್ ಕಾಲೇಜಿನಿಂದ ವ್ಯವಹಾರ ಆಡಳಿತದಲ್ಲಿ ಮಾಸ್ಟರ್ ಆಫ್ ಕಾಮರ್ಸ್ (ಎಂ.ಕಾಂ) ಪದವಿ ಹಾಗೂ 2017ರಲ್ಲಿ ಪುಣೆ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಎಜುಕೇಶನ್ (ಬಿ.ಎಡ್) ಪದವಿ ಪಡೆದಿದ್ದಾರೆ. ಅವರ ಸಂಶೋಧನೆಯು ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ಮಹಿಳಾ ಶಿಕ್ಷಕಿಯರು ವೃತ್ತಿಪರ ಬದ್ಧತೆ ಮತ್ತು ವೈಯಕ್ತಿಕ ಜವಾಬ್ದಾರಿಗಳನ್ನು ಸಮತೋಲನಗೊಳಿಸುವಲ್ಲಿ ಎದುರಿಸುವ ಸವಾಲುಗಳು ಹಾಗೂ ಅನುಭವಗಳನ್ನು ಪರಿಶೀಲಿಸುತ್ತದೆ. ಕೆಲಸ-ಜೀವನ ಸಮತೋಲನದ ಕುರಿತು ಮೌಲ್ಯಯುತ ಒಳನೋಟಗಳನ್ನು ಈ ಅಧ್ಯಯನ ಒದಗಿಸಿದೆ.ಡಾ.ಕ್ಯಾರಲ್ ಪ್ರಸ್ತುತ ಮಹಾರಾಷ್ಟ್ರದ ಅಹಿಲ್ಯಾನಗರದ ಊರ್ಜಾ ಗುರುಕುಲದ ಉಪ ಪ್ರಾಂಶುಪಾಲೆಯಾಗಿ ಸೇವೆ ಸಲ್ಲಿಸುತ್ತಿದ್ದು, ಶಿಕ್ಷಣ ಮತ್ತು ವಿದ್ಯಾರ್ಥಿ ಅಭಿವೃದ್ಧಿ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿದ್ದಾರೆ. ಅಹ್ಮದ್ನಗರ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಐವಾನ್ ಅರಾನ್ಹಾ ಅವರನ್ನು ವಿವಾಹವಾಗಿರುವ ಅವರು, ಪುತ್ರಿಯರಾದ ಈಶೆಲ್ ಮತ್ತು ಎಲಿಶಾ ಅವರೊಂದಿಗೆ ಅಹ್ಮದ್ನಗರದಲ್ಲಿ ನೆಲೆಸಿದ್ದಾರೆ.








