







ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನರಿಮೊಗರಿನ ಪ್ರಖ್ಯಾತ ‘ಬಿಂದು’ ಸಂಸ್ಥೆಯು ಮೇ ತಿಂಗಳಲ್ಲಿ ‘SIPON ACTIVE PLUS’ ಎಂಬ ಹೊಸ ಕ್ರೀಡಾ ಪಾನೀಯವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.


ತಾಜಾ ನೈಸರ್ಗಿಕ ಸೇಬಿನ ಹಣ್ಣಿನ ಪಲ್ಪ್‌ನಿಂದ ತಯಾರಿಸಲಾದ ಈ ಪಾನೀಯವು ಕಿತ್ತಳೆ ಹಣ್ಣಿನ ಫ್ಲೇವರ್ ಹೊಂದಿದೆ. ಇದರಲ್ಲಿರುವ ಗ್ಲೂಕೋಸ್ ಅಂಶವು ಕ್ರೀಡಾಪಟುಗಳಿಗೆ ತ್ವರಿತ ಶಕ್ತಿ ಹಾಗೂ ವೇಗವಾಗಿ ಕಾರ್ಯನಿರ್ವಹಿಸುವ ಶಕ್ತಿಯನ್ನು ಒದಗಿಸುತ್ತದೆ. ದೇಹದಲ್ಲಿ ನೀರಿನಂಶ ಕಾಪಾಡಲು ಹಾಗೂ ನಿರ್ಜಲೀಕರಣ ತಡೆಯಲು ಇದು ಉತ್ತಮ ಪಾನೀಯವಾಗಿದೆ.‘SIPON ACTIVE PLUS’ ಪಾನೀಯದಲ್ಲಿ ಅಥ್ಲೆಟಿಕ್ಸ್, ವ್ಯಾಯಾಮ ಅಥವಾ ಹೊರಾಂಗಣ ಕ್ರೀಡೆಗಳಿಗೆ ಅಗತ್ಯವಾದ ಖನಿಜಾಂಶಗಳಾದ ಸೋಡಿಯಂ, ಪೊಟಾಷಿಯಂ ಹಾಗೂ ಗ್ಲೂಕೋಸ್ ಸೇರಿಸಲಾಗಿದೆ. ಹೀಗಾಗಿ ಇದು ತ್ವರಿತ ಶಕ್ತಿ ನೀಡಿ ದಣಿವನ್ನು ನೀಗಿಸುತ್ತದೆ. ಒಟ್ಟಾರೆಯಾಗಿ ಇದೊಂದು ಉತ್ತಮ ಕ್ರೀಡಾ ಪಾನೀಯವಾಗಿದೆ.‘SIPON ACTIVE PLUS’ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ.













