







ಕಡಬ: ವಿಕಲಚೇತನರ ಇಲಾಖೆ ನಿರ್ದೇಶಕರು, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ಕಡಬ ತಾಲೂಕು ಸಭಾಂಗಣದಲ್ಲಿ ಕಿಸ್ವಾನ್ ಸಭೆಯು ಜೂ.23ರಂದು ನಡೆಯಿತು.



ಸರಕಾರಿ ಮತ್ತು ವಿಕಲಚೇತನರ ಇಲಾಖೆಯ ವಿಶೇಷ ಶಾಲೆಗಳಲ್ಲಿ ಓದುತ್ತಿರುವ ವಿಕಲಚೇತನ ಮಕ್ಕಳಿಗೆ ಯು.ಡಿ.ಐ.ಡಿ ಕಾರ್ಡ್ ಒದಗಿಸುವುದು, ನಿರಾಮಯ ಯೋಜನೆ ಹಾಗೂ ವಿಕಲಚೇತನರ ಇಲಾಖೆಯ ವಿವಿಧ ಯೋಜನೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ವಿಕಲಚೇತನರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಡಬ ತಾಲೂಕು ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರು ಸಭೆಯಲ್ಲಿ ಹಾಜರಿದ್ದರು.



ಈ ಸಂದರ್ಭದಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ವಿರುದ್ಧ ‘ನಶ ಮುಕ್ತ ಭಾರತ ಅಭಿಯಾನ’ ಕಾರ್ಯಕ್ರಮದ ಪ್ರತಿಜ್ಞಾ ವಿಧಿಯನ್ನು ಕಡಬ ತಾಲ್ಲೂಕು ಬೆಳಿನೆಲೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ವಿಜಯ ಕುಮಾರ್ ಏರ್ಕ ಬೋಧಿಸಿದರು.









