







ನಿಡ್ಪಳ್ಳಿ; ದ.ಕ.ಜಿ.ಪಂ.ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಏಕತ್ತಡ್ಕ ಅಜ್ಜಿಕಲ್ಲು ಇದರ ನಾಯಕಿಯಾಗಿ ಕು. ಸಾನ್ವಿ .ಎಂ. ಮತ್ತು ಉಪ ನಾಯಕಿಯಾಗಿ ಚಾರ್ವಿ . ಎಸ್. ಬಿ ಆಯ್ಕೆಯಾಗಿದ್ದಾರೆ. ಶಾಲಾ ಮಂತ್ರಿ ಮಂಡಲ ರಚನೆಯು ಚುನಾವಣೆ ಮೂಲಕ ನಡೆಯಿತು.



ಆರೋಗ್ಯ ಮಂತ್ರಿ ಶ್ರೇಯಸ್, ಉಪ ಆರೋಗ್ಯ ಮಂತ್ರಿ ಬಿಂದುಶ್ರೀ, ಶಿಕ್ಷಣ ಮಂತ್ರಿ ರಜನಿ, ಉಪ ಶಿಕ್ಷಣ ಮಂತ್ರಿ ಆಯಿಷಾ ರಿಫಾ, ವಾರ್ತಾ ಮಂತ್ರಿ ರಜನಿ, ಉಪ ವಾರ್ತಾ ಮಂತ್ರಿ ಮನ್ವಿತ್, ಕ್ರೀಡಾ ಮಂತ್ರಿ ಜೀವಿತ್ ಕುಮಾರ್, ಉಪ ಕ್ರೀಡಾ ಮಂತ್ರಿ ಯಶ್ವಿತ್, ಸಭಾಪತಿ ಯಶ್ವಿನ್ ರೈ ,ಉಪಸಭಾಪತಿ ಜೀವನ್, ಸ್ವಚ್ಛತಾ ಮಂತ್ರಿ ಸಿಮಾಖ್, ಉಪ ಸ್ವಚ್ಛತಾ ಮಂತ್ರಿ ಮೋಕ್ಷಿತ,ವಿರೋಧ ಪಕ್ಷದ ನಾಯಕ ಪ್ರಿತೇಶ್, ವಿರೋಧ ಪಕ್ಷದ ಉಪ ನಾಯಕಿ ಯಶಿಕ, ತೋಟಗಾರಿಕಾ ಮಂತ್ರಿ ಯಶ್ವಿತ್, ಉಪತೋಟಗಾರಿಕಾ ಮಂತ್ರಿ ಶೋಭಿತ್, ಪ್ರವಾಸೋದ್ಯಮ ಮಂತ್ರಿ ಅಶ್ಫಕ್, ಉಪ ಪ್ರವಾಸೋದ್ಯಮ ಮಂತ್ರಿ ಜೀವಿತ , ನೀರಾವರಿ ಮಂತ್ರಿ ಜಶ್ವಿತ್, ಉಪ ನೀರಾವರಿ ಮಂತ್ರಿ ಸಾನ್ವಿ,ಗೃಹ ಮಂತ್ರಿ ಶ್ರೇಯಸ್, ಉಪ ಗೃಹ ಮಂತ್ರಿ ರೀತಿಕಾ ಆಯ್ಕೆಯಾಗಿದ್ದಾರೆ.



ಮುಖ್ಯ ಶಿಕ್ಷಕಿ ತನುಜಾ ಎಂ.ಕೆ ಇವರ ಮಾರ್ಗದರ್ಶನದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸಹ ಶಿಕ್ಷಕರಾದ ಪ್ರೀತಂ ಎನ್, ವಿದ್ಯಾ ಪ್ರತಿಮಾ ಪಾಯಸ್, ಅತಿಥಿ ಶಿಕ್ಷಕಿಯರಾದ ಚೇತನಾ ಸತೀಶ್, ಚಂದ್ರಕಲಾ, ಲಕ್ಷ್ಮೀ ಜ್ಯೋತಿ ಸಹಕರಿಸಿದರು.









