ಮಾಣಿ-ಸಂಪಾಜೆ ರಾ.ಹೆದ್ದಾರಿ ಚತುಷ್ಪಥ ಯೋಜನೆ

0

ಡಿಪಿಆರ್ ಸಿದ್ದವಾಗಿದೆ ಅಪ್ರೂವಲ್ ಮಾಡಿಸಿ: ಶಾಸಕ ಅಶೋಕ್ ರೈ ಮನವಿ

ಪುತ್ತೂರು: ಬಹು ನಿರೀಕ್ಷೆಯ ಮಾಣಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿ 275ರ ಚತುಷ್ಪಥ ಯೋಜನೆಯ ಯೋಜನಾ ವರದಿ( ಡಿಪಿಆರ್) ಸಿದ್ದವಾಗಿದ್ದು ಅದರ ಅಪ್ರೂವಲ್‌ಗೆ ಕ್ರಮಕ್ಕಾಗಿ ಸರಕಾರಕ್ಕೆ ಡಿಪಿಆರ್ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಽಕಾರದ ಪ್ರಾದೇಶಿಕ ಆಯುಕ್ತರಿಗೆ ಶಾಸಕ ಅಶೋಕ್ ಕುಮಾರ್ ರೈ ಮನವಿ ಮಾಡಿದ್ದಾರೆ.


ಬೆಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಽಕಾರದ ಆಯುಕ್ತ ಟಿ ಶ್ರೀಧರ್ ಅವರ ಕಚೇರಿಗೆ ಭೇಟಿ ನೀಡಿ ಮಾತುಕತೆ ನಡೆಸಿದ ಶಾಸಕರು, ಈಗಾಗಲೇ ರಾಜ್ಯ ಸರಕಾರದ ಮೂಲಕ 3.19 ಕೋಟಿ ರೂ ವೆಚ್ಚದಲ್ಲಿ ಡಿಪಿಆರ್ ಸಿದ್ದಪಡಿಸಲಾಗಿದೆ. ಲೋಕೋಪಯೋಗಿ ಸಚಿವರಾಗಿದ್ದ ಸತೀಶ್‌ಜಾರಕಿಹೊಳಿಯವರ ಮೂಲಕ ಮಾಣಿ- ಸಂಪಾಜೆ ರಾ. ಹೆದ್ದಾರಿ ಚತುಷ್ಪಥ ಯೋಜನೆಯ ಡಿಪಿಆರ್ ಸಿದ್ದಪಡಿಸಿ ಕೆಲ ತಿಂಗಳುಗಳು ಕಳೆದರೂ ಇನ್ನೂ ಅದನ್ನು ಅಪ್ರೂವಲ್‌ಗೆ ರಾಷ್ಟ್ರೀಯ ಹೆದ್ದಾರಿ ಸಚಿವಾಲಯಕ್ಕೆ ಕಳುಹಿಸದ ಕಾರಣ ಈ ಬೃಹತ್ ಯೋಜನೆಗೆ ಹಿನ್ನಡೆಯಾಗಿದೆ ಎಂದು ಹೇಳಿದ ಶಾಸಕ ರೈ, ಇಲಾಖಾ ಮಟ್ಟದಲ್ಲಿ ಆಗಬೇಕಾದ ಕೆಲಸಗಳನ್ನು ತಕ್ಷಣವೇ ಮಾಡುವಂತೆ ಅಽಕಾರಿಗೆ ಮನವಿ ಮಾಡಿದರು.

ಮಾಣಿ-ಸಂಪಾಜೆ ರಾ. ಹೆದ್ದಾರಿ ಚತುಷ್ಪಥ ಯೋಜನೆಯ ಡಿಪಿಆರ್ ಸಿದ್ದಪಡಿಸಲಾಗಿದೆ, ಇದಕ್ಕಾಗಿ ಸುಮಾರು 3.19 ಕೋಟಿ ರೂ. ಅನುದಾನವನ್ನು ರಾಜ್ಯ ಸರಕಾರ ನೀಡಿದ್ದು ಕರ್ನಾಟಕ ಸರಕಾರದಿಂದ ಈ ಯೋಜನೆಗೆ ಆಗಬೇಕಾದ ಕೆಲಸಗಳು ನಡೆದಿದೆ. ನಾವು ಸಿದ್ದಪಡಿಸಿದ ಯೋಜನಾ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿ ಅದಕ್ಕೆ ಅಪ್ರೂವಲ್ ಪಡೆದುಕೊಳ್ಳಬೇಕಿದೆ. ಒತ್ತಡ ಹಾಕದೇ ಇದ್ದಲ್ಲಿ ಕೆಲಸಗಳು ನಡೆಯುವುದಿಲ್ಲ ಈ ಕಾರಣಕ್ಕೆ ಇಂದು ಇಲಾಖೆಯ ಆಯುಕ್ತರನ್ನು ಭೇಟಿಯಾಗಿ ಮನವಿ ಮಾಡಿದ್ದೇನೆ. ಮಾಣಿ-ಸಂಪಾಜೆ ಚತುಷ್ಪಥ ಹೆದ್ದಾರಿಯಾದಲ್ಲಿ ಪುತ್ತೂರು ಇನ್ನಷ್ಟು ಅಭಿವೃದ್ದಿಯಾಗುವುದರ ಜೊತೆಗೆ ಪುತ್ತೂರಿನಿಂದ ಮಂಗಳೂರಿಗೆ ಕೇವಲ ಅರ್ಧಗಂಟೆಯಲ್ಲಿ ತಲುಪಬಹುದಾಗಿದೆ, ಈ ಯೋಜನೆ ಕಾರ್ಯರೂಪಕ್ಕೆ ಬರಬೇಕೆಂಬುದು ನಾಗರಿಕರ ಒತ್ತಾಸೆಯಾಗಿದೆ
ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here