ರೋಟರಿ ಪುತ್ತೂರು ಸಿಟಿಗೆ ಪ್ಲಾಟಿನಮ್ ಪ್ಲಸ್ ಪ್ರಶಸ್ತಿ

0

ಪುತ್ತೂರು: ವಿವಿಧ ಕ್ಷೇತ್ರಗಳಲ್ಲಿ ಕೈಗೊಂಡ ಗಣನೀಯ ಸೇವಾ ಕಾರ್ಯಕ್ರಮಗಳನ್ನು ಪರಿಗಣಿಸಿ ರೋಟರಿ ಕ್ಲಬ್ ಪುತ್ತೂರು ಸಿಟಿಗೆ ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181ರ ಅತ್ಯುನ್ನತ ಪ್ಲಾಟಿನಮ್ ಪ್ಲಸ್ ಪ್ರಶಸ್ತಿ ಲಭಿಸಿದೆ.

ಜೂನ್ 20ರಂದು ಮೈಸೂರಿನ ಮೈಸೂರ್ ಯೂನಿಯನ್‌ನಲ್ಲಿ ನಡೆದ ಜಿಲ್ಲಾಮಟ್ಟದ ‘ಅನುಬಂಧ ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಕ್ಲಬ್ ಅಧ್ಯಕ್ಷ ಪಿ. ಉಲ್ಲಾಸ್ ಪೈ ನೇತೃತ್ವದ ತಂಡವು ಡಿಸ್ಟ್ರಿಕ್ಟ್ ಗವರ್ನರ್ ರಾಮಕೃಷ್ಣ ಪಿ.ಕೆ., ಪಾಸ್ಟ್ ಡಿಸ್ಟ್ರಿಕ್ಟ್ ಗವರ್ನರ್ ವಿಕ್ರಮ್ ದತ್ತ, ನಿಯೋಜಿತ ಗವರ್ನರ್ ಯಶಸ್ವಿ ಸೋಮಶೇಖರ್ ಅವರಿಂದ ಪ್ರಶಸ್ತಿ ಸ್ವೀಕರಿಸಿತು.

ಜಿಲ್ಲೆಯ 90ಕ್ಕೂ ಅಧಿಕ ರೋಟರಿ ಕ್ಲಬ್‌ಗಳ ಕಾರ್ಯಚಟುವಟಿಕೆಗಳನ್ನು ಮೌಲ್ಯಮಾಪನ ಮಾಡಿ ನೀಡುವ ಈ ಪ್ರತಿಷ್ಠಿತ ಪ್ರಶಸ್ತಿ, ಕ್ಲಬ್‌ನ ಸೇವಾ ಬದ್ಧತೆಗೆ ಸಂದ ಮಾನ್ಯತೆಯಾಗಿದೆ. ಸಿಪಿಆರ್ ತರಬೇತಿ, ಬಂಜೆತನ ನಿವಾರಣೆ, ಶಾಲಾ-ಕಾಲೇಜುಗಳಿಗೆ ಶುದ್ಧ ನೀರಿನ ಘಟಕ, ಕಾಲೇಜು ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಪರೀಕ್ಷೆ ತಯಾರಿ ಕುರಿತು 3 ದಿನದ ಕಾರ್ಯಾಗಾರ, ಮಧ್ಯಮ ವರ್ಗದ ಮಕ್ಕಳಿಗಾಗಿ ‘ವಿದ್ಯಾಜ್ಯೋತಿ ಎಲ್‌ಕೆಜಿ ತರಗತಿ’ ಸೇರಿದಂತೆ ಹಲವು ಯೋಜನೆಗಳನ್ನು ಕ್ಲಬ್ ಅನುಷ್ಠಾನಗೊಳಿಸಿದೆ.ಇದರೊಂದಿಗೆ ಆರ್.ಸಿ. ಪುತ್ತೂರು ಸಿಟಿ ‘ಔಟ್‌ರೀಚ್’ ಮತ್ತು ‘ರೀಚ್ ಎಕ್ಸಲೆನ್ಸ್’ ಪ್ರಶಸ್ತಿಗಳನ್ನೂ ಪಡೆದುಕೊಂಡಿದೆ. ಸದಸ್ಯ ರಾಮಚಂದ್ರ ಬನ್ನೂರು ಅವರಿಗೆ ‘ಅನ್‌ಸಂಗ್ ಹೀರೋ ಹೆಲ್ತ್ ಅವಾರ್ಡ್’ ಲಭಿಸಿದೆ.

“ಸರ್ವಿಸ್ ಎಬೌವ್ ಸೆಲ್ಫ್” ಧ್ಯೇಯವಾಕ್ಯದೊಂದಿಗೆ ಸಮಾಜದ ಒಳಿತಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಸದಸ್ಯರ ಸಮರ್ಪಣೆಗೆ ಈ ಗೌರವ ಸಂದಿದೆ. ಈ ಪ್ರಶಸ್ತಿ ಮುಂದಿನ ಸೇವಾ ಚಟುವಟಿಕೆಗಳಿಗೆ ಪ್ರೇರಣೆಯಾಗಿದ್ದು, ಸಾಧನೆಗೆ ಸಹಕರಿಸಿದ ಎಲ್ಲ ಸದಸ್ಯರಿಗೆ ಸಮರ್ಪಣೆ ಎಂದು ಅಧ್ಯಕ್ಷ ಪಿ. ಉಲ್ಲಾಸ್ ಪೈ ತಿಳಿಸಿದರು.ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ ಕ್ಲಬ್ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here