







ಪುತ್ತೂರು: 11ವರ್ಷಗಳ ಹಿಂದೆ ಬೈಕಿಗೆ ಡಿಕ್ಕಿ ಹೊಡೆಸಿ ತನ್ನ ಮಾಜಿ ನೌಕರನ ಕೊಲೆಗೆ ಯತ್ನ ನಡೆಸಿದ್ದ ಆರೋಪದಡಿ ವಿಚಾರಣೆ ಎದುರಿಸುತ್ತಿದ್ದ ಬಹುಭಾಷಾ ಚಿತ್ರನಟ ವಿನೋದ್ ಆಳ್ವ ಸಹಿತ ಇಬ್ಬರನ್ನು ನ್ಯಾಯಾಲಯವು ದೋಷ ಮುಕ್ತಗೊಳಿಸಿ ತೀರ್ಪು ನೀಡಿದೆ.


ದಿನಾಂಕ 15. 11. 2015 ರಂದು ವಿನೋದ್ ಆಳ್ವ ರವರ ಮಾಜಿ ನೌಕರ ಪಡುವನ್ನೂರು ಗ್ರಾಮದ ಈಶ್ವರ ಮಂಗಳ ಮಾಣಿಬೆಟ್ಟು ನಿವಾಸಿ ರಾಮ ಪಾಟಾಳಿ ಎಂಬವರ ಪುತ್ರ ಸಚ್ಚಿದಾನಂದ ಎಂಬವರ ದೂರಿನ ಆಧಾರದ ಮೇಲೆ ಸಂಪ್ಯ ಪೊಲೀಸರು ವಿನೋದ್ ಆಳ್ವ ಹಾಗೂ ಜೀಪು ಚಾಲಕ ಉದಯ ಚಿಕ್ಕಿತ್ತಾಯ ರವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.



ವಿನೋದ್ ಆಳ್ವ ಅವರನ್ನು ವಶಕ್ಕೆ ಪಡೆದುಕೊಳ್ಳಲು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿದ್ದರು. ನಗರ ಪೊಲೀಸ್ ಠಾಣೆಯಲ್ಲಿ ಅಂದು ನಿರೀಕ್ಷಕರಾಗಿದ್ದ ಮಹೇಶ್ಪ್ರಸಾದ್ ಮತ್ತು ಸಂಪ್ಯದಲ್ಲಿ ಎಸ್.ಐ. ಆಗಿದ್ದ ರವಿ ಬಿ.ಎಸ್. ನೇತೃತ್ವದಲ್ಲಿ ಸಶಸ ಪೊಲೀಸ್ ತಂಡ ಬೆಳಿಗ್ಗೆ ಗಂಟೆ 4.30ರ ವೇಳೆಗೆ ವಿನೋದ್ ಆಳ್ವರ ಮನೆಗೆ ತೆರಳಿದ್ದರು. ಆಳ್ವರ ಮನೆಯಿಂದ ತುಸು ದೂರದಲ್ಲೇ ಪೊಲೀಸರು ವಾಹನಗಳನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ಆಳ್ವರ ಮನೆಗೆ ತೆರಳಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು.
‘ವಿನೋದ್ ಆಳ್ವ ರವರ ಎಲ್ಲಾ ವ್ಯವಹಾರಗಳನ್ನು ನಾನೇ ನೋಡಿಕೊಳ್ಳುವ ಅಽಕಾರ ಪತ್ರ ಹೊಂದಿದ್ದೆ, ಆದರೆ ಅವರು ನನಗೆ ಸಿಗಬೇಕಾದ ಸವಲತ್ತುಗಳನ್ನು ನೀಡದ ಹಿನ್ನೆಲೆಯಲ್ಲಿ ಅವರ ವ್ಯವಹಾರವನ್ನು ಕೈ ಬಿಟ್ಟು ನ್ಯಾಯಾಲಯಕ್ಕೆ ದೂರು ನೀಡಿದ್ದೆ. ಎಂದಿನಂತೆ ನಾನು ನನ್ನ ಬೈಕ್ (ಕೆಎ 21 ಆರ್ 12 44) ನಲ್ಲಿ ಈಶ್ವರಮಂಗಲ ಹಾಲಿನ ಡೈರಿಗೆ ಹಾಲು ಕೊಂಡು ಹೋಗುತ್ತಿದ್ದ ವೇಳೆ ಪಡುವನ್ನೂರು ಗ್ರಾಮದ ಈಶ್ವರಮಂಗಿಲ ಶ್ರೀ ಕ್ಷೇತ್ರ ಹನುಮಗಿರಿಗೆ ಸಂಬಂಧಪಟ್ಟ ಆಶ್ರಮದ ಬಳಿ ತಲುಪುತ್ತಿದ್ದಂತೆ ಈಶ್ವರಮಂಗಿಲ ಕಡೆಯಿಂದ ಕುಕ್ಕಾಜೆ ಕಡೆಗೆ ಬರುತ್ತಿದ್ದ ಜೀಪನ್ನು ಚಲಾಯಿಸಿದ್ದ ಉದಯ ಚಿಕ್ಕಿತ್ತಾಯ ಎಂಬವರು ಜೀಪನ್ನು ನನ್ನ ಬೈಕಿಗೆ ಡಿಕ್ಕಿ ಹೊಡಿಸಿದ್ದಾರೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಮದ್ರಸಕ್ಕೆ ಹೋಗುತ್ತಿದ್ದ ಪರಿಚಯದ ಹುಡುಗನನ್ನು ಕುಳ್ಳಿರಿಸಿಕೊಂಡಿದ್ದೆ. ಬೈಕಿಗೆ ಜೀಪಿನಿಂದ ಡಿಕ್ಕಿ ಹೊಡೆದ ಪರಿಣಾಮ ನಾನು ಮತ್ತು ಸಹ ಸವಾರ ಹುಡುಗ ಚರಂಡಿಗೆ ಬಿದ್ದಿದ್ದೆವು ಜೀಪಿನಿಂದ ಉದಯ ಚಿಕ್ಕಿತ್ತಾಯ ಇಳಿದು ಬರುತ್ತಿರುವುದನ್ನು ನೋಡಿದ ನಾನು, ನನ್ನ ಜೀವಕ್ಕೆ ಅಪಾಯವಿದೆ ಎಂದು ತಿಳಿದು ಆಶ್ರಮದ ಕಡೆಗೆ ಹೋದಾಗ ನನ್ನನ್ನು ಓಡಿಸಿಕೊಂಡು ಬಂದಿದ್ದರು. ಇದೇ ಸಮಯ ಉದಯ ಚಿಕ್ಕಿತ್ತಾಯರ ಕಾಲಿಗೆ ಕಲ್ಲು ತಾಗಿ ಬಿದ್ದು ವಾಪಸ್ ಜೀಪೇರಿ ಹೋದರು. ವಿನೋದ್ ಆಳ್ವ ರವರಿಂದ ನನಗೆ ಸಿಗಬೇಕಾದ ಸವಲತ್ತುಗಳ ಕುರಿತು ನಾನು ನ್ಯಾಯಾಲಯಕ್ಕೆ ದೂರು ನೀಡಿದ್ದರಿಂದ ವಿನೋದ್ ಆಳ್ವರು ಚಾಲಕ ಉದಯ ಚಿಕ್ಕಿತ್ತಾಯರ ಮುಖಾಂತರ ಸಂಚುರೂಪಿಸಿ ಜೀಪಿನಿಂದ ಡಿಕ್ಕಿ ಉಂಟು ಮಾಡಿಸಿ ನನ್ನ ಕೊಲೆಗೆ ಯತ್ನಿಸಿರುವುದಾಗಿ’ ಆರೋಪಿಸಿ ಸಚ್ಚಿದಾನಂದ ಪಾಟಾಳಿಯವರು ಸಂಪ್ಯ ಪೋಲಿಸರಿಗೆ ದೂರು ನೀಡಿದ್ದರು.
ಈ ದೂರಿನ ಆಧಾರದಲ್ಲಿ ವಿನೋದ್ ಆಳ್ವ ಮತ್ತು ಉದಯ ಚೆಕ್ಕಿತ್ತಾಯರ ವಿರುದ್ಧ ಐಪಿಸಿ ಸೆಕ್ಷನ್ 120 ಬಿ, 34 ಮತ್ತು 307ರಡಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಬಳಿಕ ತನಿಖೆ ನಡೆಸಿದ ಪೊಲೀಸರು ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಽಶ ಸದಾನಂದ ನಾಗಪ್ಪ ನಾಯಕ್ರವರು ಆರೋಪಿಗಳಾದ ವಿನೋದ್ ಆಳ್ವ ಮತ್ತು ಉದಯ ಚಿಕ್ಕಿತ್ತಾಯರವರನ್ನು ದೋಷ ಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ ಆರೋಪಿಯ ಪರವಾಗಿ ನ್ಯಾಯವಾದಿ ಸಾಮೆತ್ತಡ್ಕ ರಮ್ಲತ್ ಎಂ. ಕಡಬ ರವರು ವಾದಿಸಿದ್ದರು.










