ಇಂದು ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ಸಾಮೂಹಿಕ ಶನಿ ಪ್ರದೋಷ ವ್ರತ-ದಕ್ಷಿಣ ಗೋಪುರ, ಶ್ರೀಹುಲಿಭೂತ ದೈವಸ್ಥಾನ, ಶೀಟ್ ಅಳವಡಿಕೆ ಕಾಮಗಾರಿಗೆ ಶಿಲಾನ್ಯಾಸ

0

ಪುತ್ತೂರು: ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ವೆಂಕಟ್ರಮಣ ಭಟ್ ಕಾನುಮೂಲೆರವರ ನೇತೃತ್ವದಲ್ಲಿ ಜೂ.27ರಂದು ಸಂಜೆ ಸಾಮೂಹಿಕ ಶನಿ ಪ್ರದೋಷ ವ್ರತ ಹಾಗೂ ಶ್ರೀಕ್ಷೇತ್ರದ ದಕ್ಷಿಣ ಗೋಪುರ, ಶ್ರೀಹುಲಿಭೂತ ದೈವಸ್ಥಾನ ಹಾಗೂ ಪಾಕಶಾಲೆಯ ಬಳಿ ಶೀಟ್ ಅಳವಡಿಕೆ ಕಾಮಗಾರಿಗಳಿಗೆ ಶಿಲಾನ್ಯಾಸ ಸಮಾರಂಭ ನಡೆಯಲಿದೆ.

ಶಿಲಾನ್ಯಾಸ ಬಳಿಕ ಸಭಾಕಾರ್ಯಕ್ರಮ ನಡೆಯಲಿದ್ದು ಶಾಸಕರು ಹಾಗೂ ದೇವಾಲಯದ ಅಭಿವೃದ್ಧಿ-ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಪಡುಮಲೆ ಶ್ರೀಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದುಕೂಡ್ಲು ಶ್ರೀನಿವಾಸ ಭಟ್ ದಕ್ಷಿಣ ಗೋಪುರಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ನಿಡ್ಪಳ್ಳಿ ಕರ್ನಪ್ಪಾಡಿ ಶ್ರೀಬ್ರಹ್ಮಬೈದರ್ಕಳ ಗರಡಿ ಸೇವಾ ಸಮಿತಿ ಅಧ್ಯಕ್ಷ ಎನ್.ಶಿವಪ್ಪ ಪೂಜಾರಿ ನುಳಿಯಾಲು ಹುಲಿಭೂತ ದೈವಸ್ಥಾನದ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಧರ್ಬೆ ದೂಮಡ್ಕ ಘಾಟೆ ಕ್ಯಾಟರರ‍್ಸ್‌ನ ಪ್ರಸಾದ್ ಘಾಟೆ ಶೀಟ್ ಅಳವಡಿಕೆಯ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here