







ಪುತ್ತೂರು: ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಶಾಲಾ ಮಂತ್ರಿಮಂಡಲ ರಚನೆ ಹಾಗೂ ವಿವಿಧ ಮಂತ್ರಿಗಳ ಪ್ರಮಾಣವಚನ ಸಮಾರಂಭ ಶಾಲಾ ಸಭಾಂಗಣದಲ್ಲಿ ನಡೆಯಿತು.


ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿವೇಕಾನಂದ ಪದವಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ವಿಜಯ ಸರಸ್ವತಿಯವರು ಮಾತನಾಡಿ; ಉತ್ತಮ ನಾಯಕತ್ವದ ಗುಣಗಳು, ನಾಯಕರ ಬದ್ಧತೆ ಹಾಗೂ ಜವಾಬ್ದಾರಿಗಳ ಬಗ್ಗೆ ತಿಳಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಶಿಕ್ಷಕ ರಕ್ಷಕ ಸಂಘದ ಸಂಯೋಜಕರು ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶಂಕರಿ ಶರ್ಮರವರು ಮಾತನಾಡುತ್ತಾ; ಮಂತ್ರಿಮಂಡಲದ ಸರ್ವಮಂತ್ರಿಗಳು ತಮಗೆ ವಹಿಸಿದ ಕೆಲಸಗಳನ್ನು ಶ್ರದ್ಧೆಯಿಂದ ಮಾಡಬೇಕು. ಅದೇ ರೀತಿ, ವಿರೋಧ ಪಕ್ಷದ ನಾಯಕರು ಆಡಳಿತ ಪಕ್ಷದವರ ಕಾಲೆಳೆಯುವುದು ಮಾತ್ರವಲ್ಲ , ಜೊತೆಗೆ ಅವರ ಕೈಗೆ ಕೈ ಜೋಡಿಸಿ, ಶಾಲೆಯ ಅಭಿವೃದ್ಧಿಗೋಸ್ಕರ ಕೆಲಸ ಮಾಡುವ ಜವಾಬ್ದಾರಿ ಇದೆ ಎಂದರು.



ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸಿಂಧು ವಿ. ಜಿ ನಾಯಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಶ್ರೀದೇವಿ ಹೆಗ್ಡೆ, ಚುನಾವಣಾ ಸಮಿತಿಯ ಮೇಲ್ವಿಚಾರಕರಾದ ಹರಿಣಾಕ್ಷಿ ಮತ್ತು ಸದಸ್ಯರು ಭಾಗವಹಿಸಿದರು. 10ನೇ ತರಗತಿಯ ವಿದ್ಯಾರ್ಥಿಗಳಾದ ಚಾರುದತ್ತ ಪಕ್ಕಳ ಸ್ವಾಗತಿಸಿ, ತನಿಷ್ ಎಮ್. ಭಟ್ ವಂದಿಸಿದರು. ಶರ್ವಾಣಿ ಪಿ. ಮತ್ತು ಸುಹಾನಾ ಪಿ.ನಾಯಕ್ ನಿರೂಪಿಸಿದರು.











