ವಿಟ್ಲ:ಕೋಮು ಸೌಹಾರ್ದತೆಗೆ ಧಕ್ಕೆ : ಆರೋಪಿ ಬೆಂಗಳೂರಿನ ಆನಂದ ಸೆರೆ

0

ವಿಟ್ಲ:ವರ್ಷದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯಾಗುವಂತಹ ಆಕ್ಷೇಪಾರ್ಹ ಕಮೆಂಟ್ ಹಾಕಿದ್ದ ಆರೋಪಿಯನ್ನು ವಿಟ್ಲ ಪೋಲೀಸರು ಬಂಧಿಸಿದ್ದಾರೆ.


ಬೆಂಗಳೂರು ವಿದ್ಯಮಾನ್ಯ ನಗರ ನಿವಾಸಿ ಆನಂದ.ಎ ಬಂಧಿತ ಆರೋಪಿ.ಈತ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದ ಪೋಸ್ಟ್ ಒಂದಕ್ಕೆ ‘ಸನಾತನಿ ಸಿಂಹ’ ಎಂಬ ಫೇಸ್‌ಬುಕ್ ಪೇಜ್ ಮೂಲಕ ಕೋಮು ಸೌಹಾರ್ದತೆಗೆ ಧಕ್ಕೆಯಾಗುವಂತಹ ಆಕ್ಷೇಪಾರ್ಹ ಕಮೆಂಟ್ ಮಾಡಿದ್ದ ಆರೋಪದಲ್ಲಿ ವಿಟ್ಲ ಠಾಣೆಯಲ್ಲಿ 2025ರ ಸೆ.18ರಂದು ಕಲಂ 353(2) ಬಿಎನ್ಎಸ್ 2023ರಂತೆ ಪ್ರಕರಣ(ಅ. ಕ್ರ.131/2025) ದಾಖಲಿಸಲಾಗಿತ್ತು.ತನಿಖೆ ನಡೆಸಿದ ವಿಟ್ಲ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


ಆರೋಪಿ ವಿರುದ್ಧ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಸುದ್ದಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 7 ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ತಿಳಿದು ಬಂದಿರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here