ಕಬಕ ಹೊಟೇಲ್ ನಲ್ಲಿ ಪೊಲೀಸರೊಂದಿಗೆ ವಾಗ್ವಾದ ಮಾಡಿದ್ದಲ್ಲ ವಿನಯಪೂರ್ವಕವಾಗಿ ನ್ಯಾಯ ಕೇಳಿದ್ದು – ಉಜ್ವಲ್ ಪ್ರಭು

0

ಪುತ್ತೂರು: ಕಬಕ ಹೊಟೇಲೊಂದರಲ್ಲಿ ನಾವು ಉಪಹಾರ ಸೇವಿಸುವಾಗ ಹೊಟೇಲ್ ಬಂದ್ ಮಾಡುವಂತೆ ಬಂದ ಪೊಲೀಸರೊಂದಿಗೆ ವಾಗ್ವಾದ ಮಾಡಿಲ್ಲ. ವಿನಯ ಪೂರ್ವಕವಾಗಿ ಕಾನೂನಿನಲ್ಲಿ ಅವಕಾಶದ ಕುರಿತು ಕೇಳಿದ್ದೇವೆ ಹೊರತು ಕಾನೂನು ಉಲ್ಲಂಘಿಸಿಲ್ಲ ಎಂದು ಉಜ್ವಲ್ ಪ್ರಭು ಅವರು ಸ್ಪಷ್ಟನೆ ನೀಡಿದ್ದಾರೆ‌.


ನಾವು ಗೆಳೆಯರೊಂದಿಗೆ ಹೊಟೇಲ್ ಗೆ ಹೋದದ್ದು ಹೌದು. ಅಲ್ಲಿ ಉಪಹಾರ ಸೇವಿಸುತ್ತಿದ್ದ ವೇಳೆ ಹೊಟೇಲ್ ಬಂದು ಮಾಡಿ ಎಂದು ಹೇಳಿದ್ದರು. ಈ ಕುರಿತು ನಾವು ಪೊಲೀಸರಲ್ಲಿ ಬಡವರಿಗೊಂದು ನ್ಯಾಯವಾ, ಶ್ರೀಮಂತರಿಗೊಂದು ನ್ಯಾಯವಾ ಎಂದು ಪೊಲೀಸರಲ್ಲಿ ವಿನಯಪೂರ್ವಕವಾಗಿ ಕೇಳಿ ಈ ತರ ಮಾಡುವಲ್ಲಿ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕೇಳಿದ್ದೇವೆ ಹೊರತು ಕಾನೂನು ಉಲ್ಲಂಘಿಸಿಲ್ಲ ಎಂದು ಉಜ್ವಲ್ ಪ್ರಭು ಸ್ಪಷ್ಟನೆ ನೀಡಿದ್ದಾರೆ.


ನಮ್ಮ ಏಳಿಗೆ ಸಹಿಸದ ರಾಜಕೀಯ ಧುರೀಣರ ಕೃತ್ಯ
ನನ್ನ ಉದ್ಯಮದ ಏಳಿಗೆ ಸಹಿಸಲಾರದ ರಾಜಕೀಯ ಧುರೀಣರಿಂದ ಅವಮಾನ ಮಾಡುವ ಕೆಲಸ ನಡೆಯುತ್ತಿದೆ. ಈ ಕುರಿತು ಕಾನೂನು ಹೋರಾಟ ಮಾಡುತ್ತೇವೆ. ಇದರ ಜೊತೆಗೆ ಎರಡು ಸಾಮಾಜಿಕ ವೆಬ್‌ಗಳು ಬ್ಲ್ಯಾಕ್ ಮೇಲ್ ಮಾಡುತ್ತಿದೆ. ನಮ್ಮ ವಿರುದ್ದ ಷಡ್ಯಂತ್ರ ಮಾಡುವ ರಾಜಕೀಯ ವ್ಯಕ್ತಿಗಳಿಗೆ ಮಹಾಲಿಂಗೇಶ್ವರ ದೇವರು ಒಳ್ಳೆಯದು ಮಾಡಲಿ ಎಂದು ಉಜ್ವಲ್ ಪ್ರಭು ಹೇಳಿದ್ದಾರೆ.

LEAVE A REPLY

Please enter your comment!
Please enter your name here