ಡಾ. ಬಿ. ಸಚ್ಚಿದಾನಂದ ರೈ ಅವರಿಗೆ ಪ್ರತಿಷ್ಠಿತ ‘ಐಎಂಎ ವೈದ್ಯ ಚೇತನ ಅವಾರ್ಡ್’

0

ಪುತ್ತೂರು: ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಕರ್ನಾಟಕ ರಾಜ್ಯ ಘಟಕದ ವತಿಯಿಂದ ನೀಡಲಾಗುವ 2026ನೇ ಸಾಲಿನ ‘ಐಎಂಎ-ಕೆಎಸ್‌ಬಿ ಡಾಕ್ಟರ್ಸ್ ಡೇ ವೈದ್ಯ ಚೇತನ ಅವಾರ್ಡ್’ಗೆ ಮಂಗಳೂರಿನ ಖ್ಯಾತ ಮೂಳೆತಜ್ಞ ಡಾ. ಬಿ. ಸಚ್ಚಿದಾನಂದ ರೈ ಆಯ್ಕೆಯಾಗಿದ್ದಾರೆ.

ಜು.1ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಕೆ.ಆರ್. ರಸ್ತೆಯ ಬೆಂಗಳೂರು ಮೆಡಿಕಲ್ ಕಾಲೇಜ್ ಸಭಾಂಗಣದಲ್ಲಿ ನಡೆಯುವ ವೈದ್ಯರ ದಿನಾಚರಣೆ ಸಮಾರಂಭದಲ್ಲಿ ಡಾ. ರೈ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಡಾ. ಸಚ್ಚಿದಾನಂದ ರೈ ಪರಿಚಯ: ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಶನ್ ಅಧ್ಯಕ್ಷರಾಗಿರುವ ಡಾ. ರೈ ಅವರು ರೆಡ್‌ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉಪಾಧ್ಯಕ್ಷರೂ ಆಗಿದ್ದಾರೆ. ಮೂಲತಃ ಪುತ್ತೂರಿನ ಬೂಡಿಯಾರ್ ಮನೆಯವರಾದ ಇವರು ವೈದ್ಯಕೀಯ ಕ್ಷೇತ್ರದಲ್ಲಿನ ಸೇವೆ ಹಾಗೂ ಸಂಘಟನಾತ್ಮಕ ಕಾರ್ಯಗಳಿಂದ ಗುರುತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here