ಹಾಸ್ಟೆಲ್‌ಗೆ ದಿಢೀರ್ ಭೇಟಿ : ಆಹಾರದ ಗುಣಮಟ್ಟ ಪರಿಶೀಲಿಸಿದ ಶಾಸಕ ಅಶೋಕ್ ರೈ

0

ಪುತ್ತೂರು: ನಗರದ ಹೊರವಲಯ ಬನ್ನೂರಿನಲ್ಲಿರುವ ದಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಶಾಸಕ ಅಶೋಕ್ ರೈ ದಿಢೀರ್ ಭೇಟಿ ನೀಡಿ ಆಹಾರದ ಗುಣಮಟ್ಟ ಪರಿಶೀಲಿಸಿದರು.

ಕಾರ್ಯಕ್ರಮದ ನಿಮಿತ್ತ ಬನ್ನೂರು ಗ್ರಾಮಕ್ಕೆ ತೆರಳಿದ್ದ ಶಾಸಕರು ದಿಢೀರನೆ ಹಾಸ್ಟೆಲ್‌ಗೆ ಭೇಟಿ ನೀಡಿದರು. ನೇರವಾಗಿ ಅಡುಗೆ ಕೋಣೆಗೆ ತೆರಳಿ ವಾರ್ಡನ್ ಜೊತೆ ಮಧ್ಯಾಹ್ನದ ಊಟ ಹಾಗೂ ತಯಾರಿಸಿಟ್ಟ ಸಾಂಬಾರನ್ನು ಪರಿಶೀಲಿಸಿದರು. ಸಾಂಬಾರನ್ನು ಸವಿದು ರುಚಿ ನೋಡಿದರು. ಬಳಿಕ ವಾರ್ಡನ್‌ರಲ್ಲಿ “ಪ್ರತಿದಿನ ಇದೇ ತರ ಆಹಾರ ನೀಡುತ್ತೀರಾ” ಎಂದು ವಿಚಾರಿಸಿದರು. “ಪ್ರತಿದಿನ ಬೇರೆ ಬೇರೆ ಪದಾರ್ಥಗಳನ್ನು, ಉತ್ತಮ ಆಹಾರವನ್ನೇ ವಿದ್ಯಾರ್ಥಿನಿಯರಿಗೆ ನೀಡುತ್ತಿದ್ದೇವೆ” ಎಂದು ವಾರ್ಡನ್ ತಿಳಿಸಿದರು. “ಇವತ್ತಿನ ಆಹಾರ ಚೆನ್ನಾಗಿದೆ, ಇನ್ನೊಮ್ಮೆ ಈ ಕಡೆ ಬಂದಾಗ ಭೇಟಿ ನೀಡುತ್ತೇನೆ” ಎಂದು ಶಾಸಕರು ತಿಳಿಸಿದರು.

“ಹಾಸ್ಟೆಲ್‌ಗೆ ಭೇಟಿ ನೀಡಿ ಆಹಾರ ಮತ್ತು ಶುಚಿತ್ವವನ್ನು ಪರಿಶೀಲನೆ ಮಾಡಿದ್ದೇನೆ. ತಯಾರು ಮಾಡಿಟ್ಟ ಆಹಾರ ಚೆನ್ನಾಗಿತ್ತು, ತಿಂದು ರುಚಿ ನೋಡಿದೆ. ಸರಕಾರದ ವ್ಯವಸ್ಥೆ ಚೆನ್ನಾಗಿದೆ ಎಂಬುದಕ್ಕೆ ಅಲ್ಲಿನ ವಿದ್ಯಾರ್ಥಿಗಳಿಗೆ ಮಾಡಿಟ್ಟ ಊಟವೇ ಸಾಕ್ಷಿ. ಶುಚಿತ್ವವೂ ಚೆನ್ನಾಗಿದೆ. ಇನ್ನೊಮ್ಮೆ ಇದೇ ರೀತಿ ಇಲ್ಲಿ ಭೇಟಿ ನೀಡುತ್ತೇನೆ. ಇಲ್ಲಿಗೆ ಮಾತ್ರವಲ್ಲ, ನನ್ನ ಕಾರ್ಯಕ್ಷೇತ್ರದಲ್ಲಿರುವ ಎಲ್ಲಾ ಸರಕಾರಿ ಸ್ವಾಮ್ಯದ ಹಾಸ್ಟೆಲ್, ಶಾಲೆ, ಅಂಗನವಾಡಿಗೆ ಭೇಟಿ ನೀಡಿ ಆಹಾರವನ್ನು ಪರಿಶೀಲನೆ ಮಾಡುತ್ತೇವೆ. ವಿದ್ಯಾರ್ಥಿಗಳಿಗೆ ಉತ್ತಮ ಆಹಾರ ನೀಡಬೇಕೆಂದು ಸರಕಾರದ ನಿರ್ದೇಶನವೂ ಇದೆ” ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here