ಪುಣಚ: ಸ್ನೇಹ ಸಂಗಮ ಆಟೋ ಚಾಲಕ ಮಾಲಕರ ಸಂಘದ ಸಭೆ

0

ಪುಣಚ: ಸ್ನೇಹ ಸಂಗಮ ಆಟೋ ಚಾಲಕ ಮಾಲಕರ ಸಂಘ ಪುತ್ತೂರು ಇದರ ಪುಣಚ ಘಟಕದ ಸಭೆ ಜೂ.29ರಂದು ಪುಣಚ ಗ್ರಾಮ ಪಂಚಾಯತು ಸಭಾಂಗಣದಲ್ಲಿ ನಡೆಯಿತು.


ಪುಣಚ ಸ್ನೇಹ ಸಂಗಮ ಅಟೊ ಚಾಲಕ ಮಾಲಕರ ಸಂಘದ ಅಧ್ಯಕ್ಷ ಶ್ರೀಧರ ಗೌಡ ಗುರ್ಮೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ವಿಟ್ಲ ಠಾಣಾ ಎ.ಎಸ್.ಐ.ಚಂದ್ರಹಾಸ ಶೆಟ್ಟಿ ಮಾತನಾಡಿ ಡ್ರೈವರ್’ಗಳು ಯಾವ ರೀತಿ ಇರಬೇಕು. ಈ ಕಾಲದಲ್ಲಿ ಗಾಂಜಾ, MDM ಹೀಗೆ ಹಲವು ನಶೆ ಪದಾರ್ಥಗಳಿಂದ ದೂರವಿರಬೇಕು. ಗಾಡಿಯಲ್ಲಿ ಸರಿಯಾದ ದಾಖಲೆ ಪತ್ರಗಳಿರಬೇಕು. ಖಾಕಿ ಹಾಕದೆ ಗಾಡಿಗೆ ಹತ್ತಬಾರದು ಎಂದು ಸವಿಸ್ತಾರವಾಗಿ ವಿವರಿಸಿದರು. ಬೀಟ್ ಪೊಲೀಸ್ ರಾಮು ಮಾತನಾಡಿ ನಿಮಗೆ ಯಾವ ಸಂದರ್ಭದಲ್ಲಿಯೂ ಯಾವುದೇ ತೊಂದರೆಯಾದರೆ ನನಗೆ ಫೋನ್ ಮಾಡಿ ನಿಮ್ಮ ಜೊತೆ ಸದಾ ನಾನಿದ್ದೇನೆ ಎನ್ನುವ ಭರವಸೆ ನೀಡಿದರು.

ಪುತ್ತೂರು ಸ್ನೇಹ ಸಂಗಮ ಆಟೋ ಚಾಲಕರ ಮಾಲಕರ ಸಂಘಟನಾ ಕಾರ್ಯದರ್ಶಿ ಇಸ್ಮಾಯಿಲ್ ಬೊಳುವಾರು ಮಾತನಾಡಿ ಸರಕಾರಕ್ಕೆ ನಾವು ತೆರಿಗೆ ಕಟ್ಟುತ್ತೇವೆ. ಆದರೆ ನಮಗೆ ಯಾವುದೇ ಸವಲತ್ತು ಸರಕಾರ ಕೊಡುದಿಲ್ಲ. ಆದ್ದರಿಂದ ನಾವು ಒಂದು ಪಾರ್ಕಿಂಗ್ ನಲ್ಲಿ ದುಡಿಯುವಾಗ ಅನೋನ್ಯತೆಯಿಂದ ಇರಬೇಕೆಂದು ಕಿವಿಮಾತು ತಿಳಿಸಿದರು. ಪುತ್ತೂರು ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ತಾರನಾಥ ಗೌಡ ಬನ್ನೂರು, ಕಾರ್ಯದರ್ಶಿ ಹರೀಶ್ ಕುಮಾರ್ ತೆಂಕಿಲ ಇವರುಗಳು ಮಾತನಾಡಿ ಹಲವು ಸಲಹೆ ಸೂಚನೆಗಳನ್ನು ನೀಡಿದರು.

ಪುಣಚ ಘಟಕದ ಅಟೋ ಚಾಲಕ ಮಾಲಕರು ಅತಿಥಿಗಳನ್ನು ಹೂಗುಚ್ಚ ನೀಡಿ ಗೌರವಿಸಿದರು. ಸಂಘದ ಸದಸ್ಯ ಆನಂದ ಬಳಂತಿಮೊಗರು ಸ್ವಾಗತಿಸಿ, ಕಾರ್ಯದರ್ಶಿ ಅಬ್ದುಲ್ ಅಜೀಜ್ ಧನ್ಯವಾದ ಗೈದರು. ಹರೀಶ್’ಚಂದ್ರ ಬಳಂತಿಮೊಗರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here