ರೋಟರಿ ಜಿಲ್ಲೆ 3181, ವಲಯ 5ರ ವಲಯ ಸೇನಾನಿ ಪಶುಪತಿ ಶರ್ಮ

0

ಪುತ್ತೂರು: ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ವಲಯ ಸೇನಾನಿಯಾಗಿ ಪಶುಪತಿ ಶರ್ಮರವರು ಆಯ್ಕೆಯಾಗಿದ್ದಾರೆ.

ಪಶುಪತಿ ಶರ್ಮಾರವರು ಕಳೆದ ಒಂಬತ್ತು ವರ್ಷಗಳಿಂದ ಪ್ರತಿಷ್ಠಿತ ರೈಡ್ ಫಾರ್ ರೋಟರಿ ಜಿಲ್ಲಾ ಕಾರ್ಯಕ್ರಮದೊಂದಿಗೆ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ವರ್ಷದ ಕಾರ್ಯಕ್ರಮದ ಕಾರ್ಯದರ್ಶಿಯಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇವರು ರೋಟರಿ ಕ್ಲಬ್ ಪುತ್ತೂರು ಯುವದ ಮಾಜಿ ಅಧ್ಯಕ್ಷರು ಹಾಗೂ ಜೆಸಿಐ ಇಂಡಿಯಾದ ಮಾಜಿ ರಾಷ್ಟ್ರೀಯ ಅಧಿಕಾರಿಯಾಗಿದ್ದು, ಶಿಕ್ಷಣ, ಆರೋಗ್ಯ, ಯುವ ಸಬಲೀಕರಣ ಹಾಗೂ ಸಮಾಜಮುಖಿ ಸೇವಾ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ.

ವೃತ್ತಿಪರವಾಗಿ ಮಾರಾಟ ಮತ್ತು ಮಾರುಕಟ್ಟೆ ಸಲಹೆಗಾರ, ಉದ್ಯಮಿ, ಮಾಧ್ಯಮ ವೃತ್ತಿಪರ ಹಾಗೂ ಸಮಾಜ ಸೇವಕರಾಗಿರುವ ಇವರು, ಪ್ರಸ್ತುತ “ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ (PRCI)” ಸೆಕ್ರೆಟರಿ ಜನರಲ್ ಆಗಿ ರಾಷ್ಟ್ರಮಟ್ಟದಲ್ಲಿ ಸಾರ್ವಜನಿಕ ಸಂಪರ್ಕ, ಸಂವಹನ ಮತ್ತು ನಾಯಕತ್ವ ಕ್ಷೇತ್ರಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ಪಶುಪತಿ ಎಲೆಕ್ಟ್ರಿಕಲ್ಸ್ & ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಮಾಲೀಕರಾಗಿದ್ದು ವಿದ್ಯುತ್ ಪರಿಹಾರಗಳು, ಇಂಧನ ಉಳಿತಾಯ ತಂತ್ರಜ್ಞಾನ ಮತ್ತು ಗ್ರಾಹಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಮಾರಾಟ ಮತ್ತು ಮಾರುಕಟ್ಟೆ ಕ್ಷೇತ್ರದಲ್ಲಿ ವಿವಿಧ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಇವರ ಪತ್ನಿ ಶ್ರೀಮತಿ ಅನ್ನಪೂರ್ಣ ಶರ್ಮಾ (B.A., LL.B., LL.M.) ಅವರು ಪೂರ್ಣ ಎಂಟರ್‌ಪ್ರೈಸಸ್ ಸಂಸ್ಥೆಯ ಮಾಲೀಕರಾಗಿದ್ದು ಮಹಿಳಾ ಆರೋಗ್ಯ ಮತ್ತು ಸ್ವಚ್ಛತೆಗೆ ಸಂಬಂಧಿಸಿದ ಸ್ಯಾನಿಟರಿ ನ್ಯಾಪ್ಕಿನ್ ಇನ್ಸಿನೆರೇಟರ್ ಹಾಗೂ ವೆಂಡಿಂಗ್ ಮಷಿನ್‌ಗಳಂತಹ ಸಾಮಾಜಿಕ ಉಪಕ್ರಮಗಳನ್ನು ಮುನ್ನಡೆಸುತ್ತಿದ್ದಾರೆ. ಸಮಾಜಮುಖಿ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.

ಸಮಾಜಸೇವೆ, ನಾಯಕತ್ವ ಮತ್ತು ಉದ್ಯಮಶೀಲತೆಯನ್ನು ಸಮನ್ವಯಗೊಳಿಸಿ ಸಮಾಜಕ್ಕೆ ನಿರಂತರ ಸೇವೆ ಸಲ್ಲಿಸುತ್ತಿರುವ ಈ ದಂಪತಿ ಅನೇಕ ಯುವ ಉದ್ಯಮಿಗಳು ಮತ್ತು ಸಮಾಜ ಸೇವಕರಿಗೆ ಪ್ರೇರಣೆಯಾಗಿದ್ದಾರೆ.

LEAVE A REPLY

Please enter your comment!
Please enter your name here