






ಪುತ್ತೂರು: ನಾಳೆ ಜುಲೈ 4ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂಬ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲವು ವೆಬ್ಸೈಟ್ಗಳಲ್ಲಿ ಹರಿದಾಡುತ್ತಿವೆ.


ಈ ಕುರಿತು ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದ್ದು, ಈ ಬಗ್ಗೆ ಜಿಲ್ಲಾ ವಾರ್ತಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ನಾಳೆ (ಜುಲೈ 4, 2026) ರಜೆಯ ಕುರಿತು ಇದುವರೆಗೆ ಜಿಲ್ಲಾಡಳಿತದಿಂದ ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ.



ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರ: ‘ನಮ್ಮ ಬಂಟ್ವಾಳ’ ಸೇರಿದಂತೆ ಕೆಲವೆಡೆ ರಜೆ ಇರುವ ಬಗ್ಗೆ ಬಂದಿರುವ ವರದಿಗಳು ಸತ್ಯಕ್ಕೆ ದೂರವಾಗಿವೆ. ಇಂತಹ ಪರಿಶೀಲಿಸದ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ವಾರ್ತಾ ಇಲಾಖೆ ಮನವಿ ಮಾಡಿದೆ.










