ಉಪ್ಪಿನಂಗಡಿ: ಆಸಿಡ್ ಸೇವಿಸಿ ಆತ್ಮಹತ್ಯೆ

0


ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಡಿ ಗ್ರಾಮದ ಪೌವತ್ತಿಲ್ ಪದಂಬಳ ಎಂಬಲ್ಲಿನ ನಿವಾಸಿ ಪಿ.ವಿ. ಜೋಸ್ (64) ಎಂಬವರು ಆಸಿಡ್ ಸೇವಿಸಿ ಆತ್ಮಹತ್ಯೆಗೈದ ಘಟನೆ ನಡೆದಿದೆ.


ಎರಡು ತಿಂಗಳ ಹಿಂದೆ ರಸ್ತೆ ಅಪಘಾತಕ್ಕೆ ಸಿಲುಕಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಗೆ ಒಳಗಾಗಿದ್ದ ಇವರು, ಇದೇ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಸಿಲುಕಿ ಗುರುವಾರದಂದು ರಬ್ಬರ್ ಕೃಷಿಗೆಂದು ತಂದಿರಿಸಿದ್ದ ಆಸಿಡ್ ಅನ್ನು ಸೇವಿಸಿ ಅಸ್ವಸ್ಥರಾಗಿದ್ದರು.

ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿ ಅವರು ಮೃತಪಟ್ಟರೆಂದು ತಿಳಿಸಲಾಗಿದೆ.


ಘಟನೆಗೆ ಸಂಬಂಧಿಸಿ ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here