







ಪುತ್ತೂರು ; ಬೆಳಂದೂರು ಗ್ರಾಮದ ಅಮೈ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಭಾರ ಮುಖ್ಯ ಗುರುಗಳಾಗಿ ಕಾರ್ಯ ನಿರ್ವಹಿಸಿದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಜಗನ್ನಾಥ ಎಸ್ ಮೇ 31 ರಂದು ಸೇವಾ ನಿವೃತ್ತರಾದರು.


ಜಗನ್ನಾಥ ಎಸ್ ಇವರು ಶಾಂತಿಗೋಡು ಗ್ರಾಮದ ಪುಂಡಿಕಾಯಿ ದಿ.ಬಾಲಪ್ಪ ಶೆಟ್ಟಿ ಮತ್ತು ದಿ.ಗಿರಿಜಾ ಶೆಟ್ಟಿ ದಂಪತಿ ಪುತ್ರರಾಗಿದ್ದು 1996ರ ಜೂನ್ ತಿಂಗಳಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆ ಸಾರ್ಯ ಇಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದರು.



ಬಳಿಕ ಶಾಂತಿಗೋಡು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕ, ಸವಣೂರು ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ ಆರೆಲ್ತಡಿ ಹಾಗೂ ಬೆಳಂದೂರು ಗ್ರಾಮದ ಅಮೈ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ.ಇಲಾಖಾ ಆದೇಶಗಳನ್ನು ಚಾಚೂ ತಪ್ಪದೆ ಪಾಲನೆ ಮಾಡಿ ಶಿಕ್ಷಕರ ಕೊರತೆ ಇದ್ದ ಆರೇಳ್ತಡಿ ಮತ್ತು ಅಮೈ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಇವರ ಸೇವೆಯನ್ನು ಗುರುತಿಸಿ ಶಿಕ್ಷಣ ಇಲಾಖೆಯು 2025-26ನೇ ಸಾಲಿನ ‘ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.ಇವರ ಪತ್ನಿ ಪ್ರಭಾವತಿ ಜೆ ಶೆಟ್ಟಿ ಗೃಹಿಣಿಯಾಗಿದ್ದು, ಹಿರಿಯ ಪುತ್ರ ಧೀಮಂತ್ ಶೆಟ್ಟಿ ಸಿ.ಎ, ಅಂತಿಮ ಹಂತದ ವಿದ್ಯಾಭ್ಯಾಸ ಪಡೆಯುತ್ತಿದ್ದು, ಕಿರಿಯ ಪುತ್ರ ದಿವಿತ್ ಶೆಟ್ಟಿ ಕೆನರಾ ಇಂಜಿನಿಯರಿಂಗ್ ಕಾಲೇಜು ಬೆಂಜನಪದವು ಇಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುತ್ತಾರೆ.










