ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಪ್ರಕರಣ ದಾಖಲು

0

ಪುತ್ತೂರು: ಪುತ್ತೂರು ವಿಧಾನ ಸಭಾ ಕ್ಷೇತ್ರದ ಹಾಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಪತ್ರಿಕಾ ಮಾಧ್ಯಮದವರ ಮುಂದೆ ’ಪುತ್ತೂರಿನ ಇದೇ ಹಿಂದಿನ ಮಾಜಿ ಶಾಸಕರು ಅವರ ಸಮಯದಲ್ಲಿ ಹಕ್ಕು ಪತ್ರ ನೀಡಲು ಎಕ್ರೆಗೆ 2 ಲಕ್ಷ ಹಣವನ್ನು ತೆಗೆದುಕೊಳ್ಳುತ್ತಿದ್ದರು, ನನ್ನಲ್ಲಿ 45 ಜನ ಸಾಕ್ಷಿಗಳು ಇದ್ದಾರೆ’ ಎಂದು ಆರೋಪ ಮಾಡಿದ್ದಾರೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಅವರನ್ನು ಗುರಿಯಾಗಿಸಿ ಅವರ ಮಾನಹಾನಿ ಮಾಡಿರುವ ವಿಚಾರದಲ್ಲಿ ಸಂಜೀವ ಮಠಂದೂರು ಅವರು ನ್ಯಾಯಾಲಯದಲ್ಲಿ ಸಲ್ಲಿಸಿರುವ ದೂರು ದಾಖಲಾಗಿದೆ.


ಮಾಜಿ ಶಾಸಕ ಸಂಜೀವ ಮಠಂದೂರು ಅವರು ಆರಂಭದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಪೊಲೀಸರು ನ್ಯಾಯಾಲಯದ ಅನುಮತಿಗೆ ಹಿಂಬರಹ ನೀಡಿದ್ದರು. ಅದರಂತೆ ಸಂಜೀವ ಮಠಂದೂರು ಅವರು ವಕೀಲ ಶಿವಾನಂದ ಎಂ.ವಕ್ಕೆತ್ತಿರಿ ವಿಟ್ಲ ಅವರ ಮೂಲಕ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಜು.4ರಂದು ಪುತ್ತೂರಿನ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಶಾಸಕ ಅಶೋಕ್ ರೈ ವಿರುದ್ಧ ಮಾಜಿ ಶಾಸಕ ಸಂಜೀವ ಮಠಂದೂರು ದಾಖಲೆ ಸಹಿತ ಪ್ರಕರಣ ದಾಖಲಿಸಿದ್ದು, ದೂರನ್ನು ಸ್ವೀಕರಿಸಿ ವಾದ ಆಲಿಸಿದ ನ್ಯಾಯಾಲಯ ಮುಂದಿನ ಪ್ರಕ್ರಿಯೆಗೆ ಪ್ರಕರಣವನ್ನು ಮುಂದೂಡಿದೆ.

LEAVE A REPLY

Please enter your comment!
Please enter your name here