







ಆಲಂಕಾರು: ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬಾ ವತಿಯಿಂದ ಡಾಕ್ಟರ್ ಡೇ ಪ್ರಯುಕ್ತ ಕವಿ, ಸಾಹಿತಿ, ನಾಟಕಕಾರ, ನಿರ್ದೇಶಕ ಮತ್ತು ಕೃಷಿಕರಾದ ಡಾ. ಹರಿದಾಸ್ ಭಟ್ ಅವರನ್ನು ಸನ್ಮಾನಿಸಲಾಯಿತು.ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಡಾ. ಹರಿದಾಸ್ ಭಟ್ ಅವರನ್ನು ಕ್ಲಬ್‌ನ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕ್ಲಬ್‌ನ ಸ್ಥಾಪಕಾಧ್ಯಕ್ಷ ಲ. ದಯಾನಂದ ರೈ, ಅಧ್ಯಕ್ಷ ಲ. ನಿತ್ಯಾನಂದ ಶೆಟ್ಟಿ, ಕಾರ್ಯದರ್ಶಿ ಲ. ಸುಂದರ ಗೌಡ, ಕೋಶಾಧಿಕಾರಿ ಲ. ಗಣೇಶ್ ರೈ, ನಿಕಟಪೂರ್ವ ಅಧ್ಯಕ್ಷ ಲ. ಪದ್ಮಪ್ಪ ಗೌಡ, ಲ. ಪ್ರಶಾಂತ್ ರೈ, ಲ. ಲಿಂಗಪ್ಪ ಪೂಜಾರಿ, ಲ. ಇಂದುಶೇಖರ್ ಶೆಟ್ಟಿ, ಲ. ಕಿರಣ್ ಪಾಜಡ್ಕ, ಲ. ಉದಯ ಸಾಲಿಯಾನ್ ಉಪಸ್ಥಿತರಿದ್ದರು.












