






ಬಡಗನ್ನೂರು : ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಕೆ. ಸಿ ಪಾಟಾಳಿ ಪಡುಮಲೆ ಶ್ರದ್ಧಾಂಜಲಿ ಸಭೆಯು ಜು. 5 ರಂದು ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಸಭಾಂಗಣದಲ್ಲಿ ನಡೆಯಿತು.


ಸರಳ ಮತ್ತು ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು. ಕೆ. ಸಿ ಪಾಟಾಳಿ – ಹೇಮನಾಥ ಶೆಟ್ಟಿ ಕಾವು
ಪುತ್ತೂರು ರಾಮಕೃಷ್ಣ ಪ್ರೌಡಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು ಕೆ. ಸಿ ಪಾಟಾಳಿ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಶೇಷ್ಠವಾದ ಮಾನವ ಜನ್ಮದಲ್ಲಿ ಹುಟ್ಟಿ ರಾಷ್ಟ್ರವನ್ನು ಪರ್ಯಟನೆ ಮಾಡುವ ಶಕ್ತಿ ಹೊಂದಿದ್ದವರು ದಿವಂಗತ ಕೆ. ಸಿ ಪಾಟಾಳಿ ರವರು. ಇವರು ಸರಳ ಮತ್ತು ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು. ವಿಶೇಷ ಗುಣ ಹೊಂದಿರುವ ಇವರು ಯಕ್ಷಗಾನ ಕಲಾವಿದ, ಶಿಕ್ಷಕ, ಸಾಹಿತಿಗಳಾಗಿ ಹೆಸರನ್ನು ಉಳಿಸಿಕೊಂಡಿದ್ದಾರೆ ಅವರ ಆದರ್ಶ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಮೃತರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ, ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಹೇಳಿ ನುಡಿನಮನ ಸಲ್ಲಿಸಿದರು.




ಪುತ್ತೂರು ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ, ಹುಟ್ಟಿದ ಪ್ರತಿಯೊಂದು ಜೀವಿಗೂ ಸಾವು ಅನಿವಾರ್ಯ, ಆದರೆ ಒಬ್ಬ ವ್ಯಕ್ತಿಯ ವೃತ್ತಿ ಮತ್ತು ಪ್ರವೃತ್ತಿ ನಡುವಿನ ಸಾಧನೆ ಮಹತ್ವವಾಗಿದೆ. ಕೋಟಿ ಚೆನ್ನಯ್ಯ ಯುವಕ ಮಂಡಲ ಹುಟ್ಟು ಹಾಕುವುದರಿಂದ ಹಿಡಿದು ಪಡುಮಲೆ ಪ್ರವಾಸಿ ತಾಣವಾಗಿ ಬೆಳಗುವಲ್ಲಿವರೆಗೆ ಕೆ. ಸಿ ಪಾಟಾಳಿ ಶ್ರಮ ಅನನ್ಯ, ಶ್ರೀಯುತರು ಶಿಕ್ಷಣ, ಧಾರ್ಮಿಕ ಸಾಂಸ್ಕೃತಿಕ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗಳ ಮೂಲಕ ಲೀನವಾಗಿದ್ದಾರೆ ಸಾಧನೆ ಎಂದೂ ಸಾಯುವುದಿಲ್ಲ ಅವರ ಆದರ್ಶದಲ್ಲಿ ಜೀವನ ನಡೆಸೋಣ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿ ಪುಷ್ಪ ನಮನ ಸಲ್ಲಿಸಿದರು.
ಓರ್ವ ಮಹಾನುಭಾವ ವ್ಯಕ್ತಿ – ನಾರಾಯಣ ತೋರಣಗಂಡಿ
ನಾರಾಯಣ ತೋರಣಗಂಡಿ ಮಾತನಾಡಿ ಪೂಜ್ಯರಾದ ಕೆ ಸಿ ಪಾಟಾಳಿಯವರು ಅಧ್ಯಾಪನ,ಕಲೆ,ಸಾಹಿತ್ಯ, ದೇವತಾರಾಧನೆ ಈ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗಮನಿಸಿ ಅವರಿಗೆ ಜಿಲ್ಲಾ ಪ್ರಶಸ್ತಿ,,ರಾಜ್ಯ ಪ್ರಶಸ್ತಿ ಸಂದಿರುತ್ತದೆ. ಮಾತ್ರವಲ್ಲ,ಶಿಕ್ಷಕರ ಸಾಧನೆಗೆ ಹೆಗ್ಗುರುತಾದ ಅತ್ಯುನ್ನತ ಪ್ರಶಸ್ತಿಯಾದ ರಾಷ್ಟ್ರಪ್ರಶಸ್ತಿ ಕೂಡ ಅವರಿಗೆ ಸಿಕ್ಕಿರುತ್ತದೆ. ಇಂತಹ ವಿಶಿಷ್ಟವೂ ಮಹತ್ವಪೂರ್ಣವಾದ ಸಾಧನೆಯ ಮೂಲಕ ಒಂದು ಮಾದರಿ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹನೀಯರು ಕೆ.ಸಿ .ಮಾಸ್ತರರು. ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಮುಖ್ಯ ತರಬೇತುದಾರರಾಗಿ,ಸಂಪನ್ಮೂಲ ವ್ಯಕ್ತಿಯಾಗಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಅವರು ಹಾಕಿಕೊಟ್ಟ ಮೇಲ್ಪಂಕ್ತಿ ಮುಂದಿನ ಜನಾಂಗಕ್ಕೆ ದಾರಿದೀಪವಾಗಲಿ .ಅವರ ಸಾಧನೆ ಚಿರಾಯುವಾಗಲಿ ಪರಮಾತ್ಮನಲ್ಲಿ ಐಕ್ಯವಾಗಿರುವ ಅವರ ದಿವ್ಯ ಆತ್ಮವು ಮತ್ತೊಮ್ಮೆ ಭುವಿಗೆ ಬೆಳಕನ್ನು ತರಲು ಜನ್ಮ ತಳೆದು ಬರಲಿ ಎಂದು ನುಡಿನಮನ ಸಲ್ಲಿಸಿದರು.

ದೖೆವ ನರ್ತಕ ಡಾ ರವೀಶ್ ಪಡುಮಲೆ ಮಾತನಾಡಿ ಗುರು ಸಮಾನರು ಸದಾ ಮಾರ್ಗದರ್ಶಕರಾದ ಕೆ. ಸಿ ಪಾಟಾಳಿ ರವರು ಪಡುಮಲೆ ಇತಿಹಾಸವನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ. ಇಂದು ನಮ್ಮನ್ನು ಅಗಲಿ ದೇವರ ಪಾದ ಸೇರಿದ ಅವರ ದಿವ್ಯ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಪುಷ್ಪ ನಮನ ಸಲ್ಲಿಸಿದರು.
ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೖೆ ಕಟ್ಟಾವು, ಕೆಯ್ಯೂರು ಪ್ರಾಥಮಿಕ ಶಾಲಾ ವಿಭಾಗದ ಪದವೀಧರ ಶಿಕ್ಷಕ ಬಾಬು ಮಾಸ್ಟರ್, ಶಂಕರ ಮಾಸ್ಟರ್ ಮುಕ್ರಂಪ್ಪಾಡಿ, ಗೋಪಾಲಕೃಷ್ಣ ಮಾಸ್ಟರ್ ಪಂಜತ್ತೊಟ್ಯ,, ಸುದೀರ್ ಮಾಸ್ಟರ್ ಮುಳ್ಳೇರಿಯ, ಡಾ.ಜ್ಯೋತಿ ಪಿ. ಎಸ್, ವಾಣಿಯಾನ ಗಾಣಿಗ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ರಾಮ ಮೊಗರೋಡಿ, ಪುಷ್ಪಾರ್ಚನೆ ಮಾಡಿ ನುಡಿನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಗಣ್ಯರು, ಶಿಕ್ಷಕ ಮಿತ್ರರು, ಯಕ್ಷಗಾನ ಕಲಾವಿದರು, ಬಂಧು ಮಿತ್ರರು ಗ್ರಾಮಸ್ಥರು ಹಾಗೂ ಮನೆಯವರು ಭಾಗವಹಿಸಿ ಪುಷ್ಪ ನಮನ ಸಲ್ಲಿಸಿದರು.ಸಹಾಯಕ ಶಿಕ್ಷಣಾಧಿಕಾರಿ ನಾರಾಯಣ ದೇಲಂಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಯರಾಮ್ ಪಾಟಾಳಿ ಪಡುಮಲೆ ಕಾರ್ಯಕ್ರಮ ಅಯೋಜಿಸಿದರು.ಶಿಕ್ಷಕಿ ಅರುಣಾ ಕೆಸಿ ವಂದಿಸಿದರು.

ಗಾನಾರ್ಚನೆ ಮೂಲಕ ಶ್ರದ್ಧಾಂಜಲಿ ಸಮರ್ಪಣೆ :
ಕೆ. ಸಿ ಪಾಟಾಳಿ ರವರಿಗೆ ಯಕ್ಷಗಾನ ಅತೀ ಪ್ರೀಯವಾದ ಕಲೆ ಈ ದೃಷ್ಟಿಯಿಂದ ಆರಂಭದಲ್ಲಿ ಭಾಗವತರಾದ ಸುರೇಶ್ ಹೆಗ್ಡೆ ಕುಳದಪಾರೆ, ಹಾಗೂ ಅಡ್ವಳ ಬೀಡು ಮನೋಹರ ಬಲ್ಲಾಳ್ ಇವರ ಹಾಡುಗಾರಿಕೆಯಲ್ಲಿ ಅಪ್ಪಕುಂಞಿ ಯಾಧವ್ ಮಿಂಚಿಪದವು ರಚನೆಯ ಗುರುನಮನ ಗಾನಾರ್ಚನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮದ್ದಳೆ ವಾದಕರಾಗಿ ಪ್ರಸಾದ್ ದೇಲಂಪಾಡಿ, ಚೆಂಡೆ ವಾದಕರಾಗಿ ಆಯುಶ್ ಪುತ್ತೂರು, ಚಕ್ರತಾಳದಲ್ಲಿ ಗಣೇಶ್ ಭಟ್ ಈಶಮೂಲೆ ಸಹಕರಿಸಿದರು.










