







ಪುತ್ತೂರು: ಗಾಳಿ ಮಳೆಗೆ ಹಾರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ತರಗತಿಯೊಂದರ ಮೇಲ್ಛಾವಣಿಯ ಹಂಚುಗಳು ಬಿದ್ದ ಘಟನೆ ನಡೆದಿದೆ.


ಘಟನೆಯಿಂದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಯಾವುದೇ ಅಪಾಯವಾಗಿಲ್ಲ. ಹಾರಾಡಿ ಶಾಲೆಯಲ್ಲಿ ತಾಲೂಕಿನಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳ ಸಂಖ್ಯೆ ಇದೆ. ಹೆಚ್ಚಿನ ವಿದ್ಯಾರ್ಥಿಗಳಿರುವ ಕಾರಣ ಶಾಲಾ ಕಟ್ಟಡದ ಬದಿ ಹೆಚ್ಚುವರಿ ತರಗತಿ ಕೋಣೆ ನಿರ್ಮಿಸಿ ತರಗತಿ ನಡೆಸಲಾಗುತ್ತಿತ್ತು. ಜೋರು ಗಾಳಿ ಬೀಸಿದ ಪರಿಣಾಮ ಹಂಚುಗಳು ಬಿದ್ದಿದೆ. ಘಟನಾ ಸ್ಥಳಕ್ಕೆ ಪುತ್ತೂರು ನಗರಸಭಾ ಇಂಜಿನಿಯರ್, ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.













