ಅಲೆಕ್ಕಿ-ಶಾಂತಿನಗರ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡಚಣೆ, ಸ್ಥಳೀಯರಿಂದ ತೆರವು

0

ನೆಲ್ಯಾಡಿ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಗೋಳಿತ್ತೊಟ್ಟು ಗ್ರಾಮದ ಅಲೆಕ್ಕಿ-ಶಾಂತಿನಗರ ಸಂಪರ್ಕ ರಸ್ತೆಯ 3 ಕಡೆಯಲ್ಲಿ ಮರಗಳು ಧರೆಗುರುಳಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.


ಜು.7ರಂದು ಸಂಜೆ ಬೀಸಿದ ಗಾಳಿ ಹಾಗೂ ಮಳೆಗೆ ಅಲೆಕ್ಕಿ-ಶಾಂತಿನಗರ ರಸ್ತೆ ಬದಿಯ ಬೃಹತ್ ಮರಗಳು ರಸ್ತೆಗೆ ಬಿದ್ದ ಪರಿಣಾಮ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ಗೋಳಿತ್ತೊಟ್ಟು, ಅಲೆಕ್ಕಿ ಮತ್ತು ಸುತ್ತಮುತ್ತಲ ಪ್ರದೇಶದ ಗ್ರಾಮಸ್ಥರು ಪರದಾಡುವಂತಾಯಿತು. ರಸ್ತೆಗೆ ಬಿದ್ದ ಮರಗಳನ್ನು ಸ್ಥಳೀಯರಾದ ಭಾಸ್ಕರ ಅಲೆಕ್ಕಿ, ಮಹಾಬಲ ಅಲೆಕ್ಕಿ, ಶ್ಯಾಮ್ ಸುಲ್ತಾಜೆ, ಜಯಂತ ಅಂಬರ್ಜೆ ಸುಮಾರು 3 ಗಂಟೆಗಳ ಕಾಲ ಶ್ರಮಿಸಿ ಮರದ ಕೊಂಬೆಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು. ಮಳೆಗಾಲದ ಸಮಯದಲ್ಲಿ ಇಂತಹ ಘಟನೆಗಳು ನಡೆದ ಸಂದರ್ಭದಲ್ಲಿ ತುರ್ತು ಕೆಲಸ ನಿರ್ವಹಿಸಿ ಸಂಚಾರಕ್ಕೆ ಅಡಚಣೆಯಾಗದಂತೆ ಗ್ರಾಮ ಪಂಚಾಯಿತಿ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here