ಬೆಟ್ಟಂಪಾಡಿ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆ

0

ಅಧ್ಯಕ್ಷ: ಕಾರ್ತಿಕ್, ಉಪಾಧ್ಯಕ್ಷ :ಫಾತಿಮತ್ ರಮೀಸ, ಕಾರ್ಯದರ್ಶಿ :ಯಶಸ್ವಿನಿ, ಜೊತೆ ಕಾರ್ಯದರ್ಶಿ: ಧನೀಶ್

ಪುತ್ತೂರು : ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜು ಬೆಟ್ಟಂಪಾಡಿ ಇದರ 2026 -27ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆ ಜೂನ್ 27ರಂದು ಇವಿಎಂ ಸಿಮ್ಯುಲೇಟರ್ ಆಪ್ ಮುಖಾಂತರ ನಡೆಯಿತು. ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ಕಾರ್ತಿಕ್ ಹಾಗೂ ಕಾರ್ಯದರ್ಶಿಯಾಗಿ ಯಶಸ್ವಿನಿ ಆಯ್ಕೆಗೊಂಡರು.

ಉಪಾಧ್ಯಕ್ಷ ಸ್ಥಾನಕ್ಕೆ ಫಾತಿಮತ್ ರಮೀಸ ಹಾಗೂ ಜೊತೆ ಕಾರ್ಯದರ್ಶಿ ಸ್ಥಾನಕ್ಕೆ ಧನೀಶ್ ಅವರನ್ನು ನೇಮಕ ಮಾಡಲಾಯಿತು. ಪ್ರಥಮ ಮತ್ತು ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳು ವಿದ್ಯುನ್ಮಾನ ಮತಯಂತ್ರದ ಮೂಲಕ ಮತಚಲಾಯಿಸಿ ಹೊಸ ಅನುಭವ ಪಡೆದುಕೊಂಡರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಅಬ್ದುಲ್ ರಜಾಕ್ ಇವರು ಮುಖ್ಯ ಚುನಾವಣಾ ಅಧಿಕಾರಿಯಾಗಿ ಹಾಗೂ ರಾಜ್ಯ ಶಾಸ್ತ್ರ ಉಪ ನ್ಯಾಸಕರಾದ ಪುಷ್ಪರಾಜ್ ಇವರು ಸಮನ್ವಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಸಹಕರಿಸಿದರು. ಪ್ರಾಂಶುಪಾಲರು ಫಲಿತಾಂಶ ಘೋಷಿಸಿ,ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here