ಒಕ್ಕಲಿಗ ಗೌಡ ಸೇವಾ ಸಂಘದಿಂದ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮ

0

ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘದ ನೇತೃತ್ವದಲ್ಲಿ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಅವರಿಂದ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಕ್ರಮ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ಜು.11ರಂದು ನಡೆಯಿತು.


ಆಧುನಿಕ ಯುಗಕ್ಕೆ ಪ್ರಥಮ ಚಿಕಿತ್ಸೆಯ ಅರಿವು ಅಗತ್ಯ:
ಮಾಜಿ ಶಾಸಕರು ಮತ್ತು ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಉಪಾಧ್ಯಕ್ಷ ಸಂಜೀವ ಮಠಂದೂರು ಅವರು ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಆರೋಗ್ಯವೇ ಭಾಗ್ಯ. ಆದರೆ ಇದರ ಅರಿವು ಆಗುವುದು ಅನಾರೋಗ್ಯವಾದಾಗ ಮಾತ್ರ. ಹಾಗಾಗಿ ಕಾಯಿಲೆ ಬರುವ ಮೊದಲೇ ಕಾಯಿಲೆ ಬಾರದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಯೋಗದ ಮೂಲಕ ರೋಗ ದೂರ ಮಾಡಬಹುದು ಎಂದು ಜಗತ್ತಿಗೆ ನಾವು ಸಾರಿದ್ದೇವೆ. ಈ ಎಲ್ಲಾ ಪ್ರಯತ್ನಗಳ ಮಧ್ಯೆ ಅನೇಕ ಘಟನೆಗಳಿಗೆ ತಕ್ಷಣಕ್ಕೆ ಇತರರನ್ನು ಬದುಕಿಸಲು ತಾವೇನು ಮಾಡಬೇಕು ಎಂಬುದನ್ನು ಪ್ರಥಮ ಚಿಕಿತ್ಸೆ ಹೇಗೆ ಕೊಡಬೇಕೆಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಅಧುನಿಕ ಯುಗದಲ್ಲಿ ನಾವು ಯಾವ ರೀತಿಯಲ್ಲಿ ತುರ್ತು ಚಿಕಿತ್ಸೆಗೆ ಪೂರಕವಾಗಿ ಕೆಲಸ ಮಾಡಬೇಕು ಎಂಬುದು ಅರಿಯುವುದು ಬಹಳ ಅಗತ್ಯ ಎಂದರು.


ಪ್ರಥಮ ಚಿಕಿತ್ಸೆಯ ಅರಿವು ಎಲ್ಲರಿಗೂ ಇರಬೇಕು:
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಇತ್ತೀಚಿಗಿನ ದಿನದಲ್ಲಿ ಬರುವಂತಹ ಸಾವು ನೋವಿನಲ್ಲಿ ತಕ್ಷಣದ ಪರಿಹಾರ ಕ್ರಮ ತಿಳಿದುಕೊಳ್ಳುವುದು ಬಹಳ ಅಗತ್ಯ. ಈ ನಿಟ್ಟಿನಲ್ಲಿ ಸಂಘದ ಮೂಲಕ ಪ್ರಥಮ ಚಿಕಿತ್ಸೆಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.


ಆಸ್ತಿ, ಹಣಕ್ಕಿಂತ ಆರೋಗ್ಯ ಮುಖ್ಯ:
ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಆಧುನಿಕ ಕಾಲದಲ್ಲಿ ಮರಣ ಹೊಂದುವುವು ಹೆಚ್ಚಾಗುತ್ತಿರುವ ಸಂದರ್ಭ ಆರೋಗ್ಯದ ಅರಿವು ಮೂಡಿಸುವುದು ಅಗತ್ಯ. ಎಷ್ಟು ಆಸ್ತಿ, ಹಣ ಮಾಡಿದರೂ ಆರೋಗ್ಯವನ್ನು ಕಾಪಾಡದಿದ್ದರೆ ಯಾವ ಪ್ರಯೋಜನವೂ ಇಲ್ಲ. ಇದಕ್ಕೆ ಕಾರಣ ಆರೋಗ್ಯದ ಮಾಹಿತಿ ಕೊರತೆ. ಈ ಕೊರತೆ ನೀಗಿಸಲು ಕಳೆದ ಹಲವು ವರ್ಷಗಳಿಂದ ಒಕ್ಕಲಿಗ ಗೌಡ ಸಂಘದಲ್ಲಿ ಅರೋಗ್ಯ ಮಾಹಿತಿ ಕಾರ್ಯಕ್ರಮ ನೀಡುತ್ತಿದ್ದೇವೆ. ಈ ಭಾರಿ ಪ್ರಥಮ ಚಿಕಿತ್ಸೆಯ ಮಾಹಿತಿ ಶಿಬಿರ ಮಾಡುತ್ತಿದ್ದೇವೆ ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಶ್ರೀಧರ ಗೌಡ ಪಾಣತ್ತಿಲ, ಕೆ ಎಂ ಸಿ ಆಸ್ಪತ್ರೆಯ ತುರ್ತು ವೈದ್ಯಕೀಯ ವಿಭಾಗದ ಡಾ.ವೈಷ್ಣು ಪಿ ನಾಯರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮನಮೋಹನ್ ದೇವ, ಸಿಬ್ಬಂದಿ ಜಿತೇಶ್ , ಮಹಿಳಾ ಸಂಘದ ಅಧ್ಯಕ್ಷ ಸಂದ್ಯಾಶಶಿಧರ್. ಯುವ ಗೌಡ ಸಂಘದ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಕ್ಕಲಿಗ ಸ್ವಸಹಾಯ ಸಂಘದ ನಿಕಟಪೂರ್ವ ಅಧ್ಯಕ್ಷ ಮನೋಹರ್ ಡಿ ವಿ, ಸಮುದಾಯ ಭವನದ ಉಸ್ತುವಾರಿ ಲಿಂಗಪ್ಪ ಗೌಡ ತೆಂಕಿಲ, ಸಂಘದ ಮಾಜಿ ಅಧ್ಯಕ್ಷರಾದ ನಾಗಪ್ಪ ಗೌಡ ಬೊಮ್ಮೆಟ್ಟಿ, ರವಿಮುಂಗ್ಲಿಮನೆ, ಯುವ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ, ಸುರೇಶ್ ಕಲ್ಲಾರೆ, ಗೌರಿ ಬನ್ಬೂರು, ಪ್ರೇಮನಾಥ್, ಆನಂದ ಗೌಡ ಮೂವಪ್ಪು ಅತಿಥಿಗಳನ್ನು ಗೌರವಿಸಿದರು. ಸುಮಲತಾ ಪ್ರಾರ್ಥಿಸಿದರು. ಸಂಘಟಕ ಪುರುಷೋತ್ತಮ ಮುಂಗ್ಲಿಮನೆ ಕಾರ್ಯಕ್ರಮ ನಿರೂಪಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಡಾ ಶ್ರೀಧರ್ ಗೌಡ ಪಾಣತ್ತಿಲ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರಥಮ ಚಿಕಿತ್ಸೆಯ ಪ್ರಾತ್ಯಕ್ಷಿಕೆ ನಡೆಯಿತು. ಸಂಘಟಕ ಯತೀಶ್ ದೇವ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here