ಕರ್ನಾಟಕ ಬ್ಯಾಂಕ್ ದರ್ಬೆ ಶಾಖೆ ವರುಷದ ಸಂಭ್ರಮ- ಸವಣೂರು ಸೀತಾರಾಮ ರೈ ಅವರಿಂದ ಶುಭಹಾರೈಕೆ

0

ಪುತ್ತೂರು: ದರ್ಬೆ ಪ್ರಶಾಂತ್ ಮಹಲ್‌ನ ನೆಲ ಅಂತಸ್ತಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಬ್ಯಾಂಕ್ ಪ್ರಾರಂಭಗೊಂಡು ಒಂದು ವರ್ಷ ಪೂರ್ತಿಗೊಂಡ ಹಿನ್ನಲೆಯಲ್ಲಿ ವರುಷದ ಸಂಭ್ರಮ ಕಾರ್ಯಕ್ರಮ ಜು. 14 ರಂದು ಜರಗಿತು.

ದರ್ಬೆ ಪ್ರಶಾಂತ್ ಮಹಲ್ ನ ಮಾಲಕರಾದ “ಸಹಕಾರ ರತ್ನ” ಸವಣೂರು ಕೆ. ಸೀತಾರಾಮ ರೈ ಯವರು ಕರ್ನಾಟಕ ಬ್ಯಾಂಕ್ ದರ್ಬೆ ಶಾಖೆಯು ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಬ್ಯಾಂಕ್ ಗೆ ಶುಭಹಾರೈಸಿ. ಬ್ಯಾಂಕ್ ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲಿ. ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವ ಬ್ಯಾಂಕಿನ ಸಿಬ್ಬಂದಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬ್ಯಾಂಕಿನ ಶಾಖಾ ವ್ಯವಸ್ಥಾಪಕರಾದ ಸ್ವರ್ಣಲತಾ ಕೆ., ಸಹಾಯ ಶಾಖಾ ವ್ಯವಸ್ಥಾಪಕರಾದ ಶ್ರೀನಿಧಿ, ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಸಹಾಯಕ ಮಹಾ ಪ್ರಬಂದಕರಾದ ಸುನಾದ್ ರಾಜ್ ಶೆಟ್ಟಿ, ಹೋಟೆಲ್ ಪ್ರಶಾಂತ್ ಮಹಲ್ ನ ಮ್ಯಾನೇಜರ್ ರಾಮಣ್ಣ ಗೌಡ, ರೈ ಅಸೋಸಿಯೇಟ್ಸ್ ಮ್ಯಾನೇಜರ್ ಜಗನ್ನಾಥ ಶೆಟ್ಟಿ ಮತ್ತು ಬ್ಯಾಂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here