ಪೆರುವಾಜೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘಕ್ಕೆ ನೇಸರ ಯುವಕ ಮಂಡಲದಿಂದ ಗೋದ್ರೆಜ್ ಕೊಡುಗೆ

0

ಪೆರುವಾಜೆ : ಮುಕ್ಕೂರು ನೇಸರ ಯುವಕ ಮಂಡಲದ ದಶಮಾನೋತ್ಸವ ಅಂಗವಾಗಿ ಡಾ. ಕೆ. ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಹಿರಿಯ ವಿದ್ಯಾರ್ಥಿ ಸಂಘದ ಕಚೇರಿಗೆ ಗೋದ್ರೆಜ್ (ಕಬೋರ್ಡ್) ಕೊಡುಗೆಯಾಗಿ ನೀಡಲಾಯಿತು.


ಕಾಲೇಜಿನ ಪ್ರಾಂಶುಪಾಲ ಬಾಲಸುಬ್ರಹ್ಮಣ್ಯ ಅವರಿಗೆ ಮುಕ್ಕೂರು ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಗೋದ್ರೆಜ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲ ಬಾಲಸುಬ್ರಹ್ಮಣ್ಯ, ನೇಸರ ಯುವಕ ಮಂಡಲದ ಸಮಾಜಮುಖಿ ಕಾರ್ಯಗಳು ಶ್ಲಾಘನೀಯವಾಗಿದ್ದು, ಹಿರಿಯ ವಿದ್ಯಾರ್ಥಿ ಸಂಘದ ಕಚೇರಿಗೆ ನೀಡಿರುವ ಗೋದ್ರೆಜ್ ದಾಖಲೆಗಳ ಸುಸೂತ್ರ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಖಜಾಂಜಿ ಯಶೋಧಾ ಪೆರುವಾಜೆ, ಕಾಲೇಜಿನ ಕಚೇರಿ ಸಿಬಂದಿ ಶಿವರಾಮ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here