ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮನೋರೋಗ-ಬೌದ್ಧಿಕ ವಿಕಲಚೇತನರ ಪ್ರಮಾಣ ಪತ್ರ ಶಿಬಿರ

0

ಪುತ್ತೂರು: ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ವತಿಯಿಂದ ಮನೋರೋಗ ಹಾಗೂ ಬೌದ್ಧಿಕ ವಿಕಲಚೇತನರ ಪ್ರಮಾಣ ಪತ್ರ ಶಿಬಿರ ಮತ್ತು ನೂತನ ಮಾನಸಿಕ ತಜ್ಞರ ಅಭಿನಂದನಾ ಕಾರ್ಯಕ್ರಮ ಜು.14ರಂದು ನಡೆಯಿತು.

ಶಿಬಿರದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮಾನಸಿಕ ತಜ್ಞರಾದ ಡಾ. ಸ್ವಾತಿಕ್ ರಾವ್ ಉಪಸ್ಥಿತರಿದ್ದರು. ಪುತ್ತೂರು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಯದುರಾಜ್ ಡಿ.ಕೆ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಅರ್ಹರಿಗೆ ಪ್ರಮಾಣ ಪತ್ರ ವಿತರಣೆ
ಶಿಬಿರದಲ್ಲಿ ಡಾ. ಸ್ವಾತಿಕ್ ರಾವ್ ಮತ್ತು ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಿಬ್ಬಂದಿಗಳು ಅರ್ಹ ಮನೋರೋಗ ಹಾಗೂ ಬೌದ್ಧಿಕ ವಿಕಲಚೇತನರನ್ನು ತಪಾಸಣೆ ನಡೆಸಿ ವಿಕಲಚೇತನರ ಪ್ರಮಾಣ ಪತ್ರಗಳನ್ನು ಒದಗಿಸಿ ಕೊಟ್ಟರು.

ನೂತನ ತಜ್ಞರಿಗೆ ಅಭಿನಂದನೆ
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ನೂತನ ಮಾನಸಿಕ ತಜ್ಞರಾದ ಡಾ. ಸ್ವಾತಿಕ್ ರಾವ್ ಅವರನ್ನು ಪುತ್ತೂರು ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಕಲಚೇತನರ ಸೇವಾ ಕೇಂದ್ರ ಕಚೇರಿ ಹಾಗೂ ಪುತ್ತೂರು ಮತ್ತು ಕಡಬ ತಾಲೂಕಿನ ವಿಕಲಚೇತನರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮೀಣ ಮತ್ತು ನಗರ ಪುನರ್‌ವಸತಿ ಕಾರ್ಯಕರ್ತರ ವತಿಯಿಂದ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಪಂಚಾಯತ್ ವಿಕಲಚೇತನರ ವಿವಿಧೋದ್ದೇಶ ಪುನರ್‌ವಸತಿ ಕಾರ್ಯಕರ್ತರಾದ ನವೀನ್ ಕುಮಾರ್ ಹಾಗೂ ಪುತ್ತೂರು ಮತ್ತು ಕಡಬ ತಾಲೂಕಿನ ಗ್ರಾಮೀಣ ಮತ್ತು ನಗರ ಪುನರ್‌ವಸತಿ ಕಾರ್ಯಕರ್ತರು ಉಪಸ್ಥಿತರಿದ್ದರು.




LEAVE A REPLY

Please enter your comment!
Please enter your name here