







ಉಪ್ಪಿನಂಗಡಿ: ಇಲ್ಲಿನ ಮಠದ ಸಫಾ ಯಂಗ್ಮೆನ್ಸ್ ಅಸೋಸಿಯೇಷನ್ನ ವತಿಯಿಂದ ಮಠದ ಸಫಾನಗರದ ಅಂಗನವಾಡಿ ಕೇಂದ್ರಕ್ಕೆ ಇನ್ವಾರ್ಟರ್ ಅನ್ನು ಕೊಡುಗೆಯಾಗಿ ನೀಡಲಾಯಿತು.



ಮಕ್ಕಳ ಶೈಕ್ಷಣಿಕ ವಾತಾವರಣಕ್ಕೆ ವಿದ್ಯುತ್ ವ್ಯತ್ಯಯದಿಂದ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸಂಘಟನೆಯು ಈ ಕೊಡುಗೆಯನ್ನು ಹಸ್ತಾಂತರಿಸಿದೆ. ಈ ಸಂದರ್ಭ ಯಂಗ್ಮೆನ್ಸ್ ಅಧ್ಯಕ್ಷ ಸಾಬೀತ್ ಮಠ, ಕಾರ್ಯದರ್ಶಿ ರಶೀದ್ ಎಚ್.ಎನ್., ಮಸೀದಿ ಅಧ್ಯಕ್ಷ ಆಸೀಫ್ ಎಂ.ಕೆ., ಆದಂ ಕೊಪ್ಪಳ, ನಜೀರ್ ಮಠ, ನಾಸಿರ್ ವೈ.ಎನ್.ಕೆ., ಮುಸ್ತಫ ಕೆ.ಪಿ., ಮಜೀದ್ ಯು.ಎಂ., ಹನೀಫ್ ಟಿ. ರಜಾಕ್ ಕೊಪ್ಪಳ, ನಾಸಿಕ್ ನೌಫಲ್, ಇಕ್ಬಾಲ್, ಅಂಗನವಾಡಿ ಕಾರ್ಯಕರ್ತೆ ಸಬಾನ ಕೊಪ್ಪಳ, ಸಹಾಯಕಿ ರೇಖಾ ಹಿರ್ತಡ್ಕ ಮತ್ತಿತ್ತರರು ಉಪಸ್ಥಿತರಿದ್ದರು.












