






ಅಧ್ಯಕ್ಷರಾಗಿ ಪ್ರಖ್ಯಾತ್ ಸಾಲ್ಯಾನ್ ನುಳಿಯಾಲು, ಕಾರ್ಯದರ್ಶಿಯಾಗಿ ವಿಜಿತ್ ಪೂಜಾರಿ ದೇವಸ್ಯ


ನಿಡ್ಪಳ್ಳಿ; ಬಿಲ್ಲವ ಬ್ರಿಗೇಡ್ (ರಿ.) ಪುತ್ತೂರು ಸಂಘಟನೆಯ ನಿಡ್ಪಳ್ಳಿ ಗ್ರಾಮ ಸಮಿತಿಯನ್ನು ರಚಿಸಲಾಯಿತು.ಅಧ್ಯಕ್ಷರಾಗಿ ಪ್ರಖ್ಯಾತ್ ಸಾಲ್ಯಾನ್ ನುಳಿಯಾಲು, ಕಾರ್ಯದರ್ಶಿಯಾಗಿ ವಿಜಿತ್ ಪೂಜಾರಿ ದೇವಸ್ಯ ಇವರನ್ನು ಆರಿಸಲಾಯಿತು.



ಸದಸ್ಯರಾಗಿ ಸುಶಾಂತ್ ಪೂಜಾರಿ ದೇವಸ್ಯ,ಪ್ರಸಾದ್ ಪೂಜಾರಿ ಹೊಸಮನೆ, ದೀಕ್ಷಿತ್ ಪೂಜಾರಿ ದೇವಸ್ಯ, ಸುಭಾಷ್ ಪೂಜಾರಿ ಕಾನ, ತನುಶ್ ಪೂಜಾರಿ ಕಾನ ಇವರನ್ನು ಆರಿಸಲಾಯಿತು.ಸಂಘಟನೆಯ ಬಲವರ್ಧನೆ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವ ಉದ್ದೇಶದಿಂದ ಗ್ರಾಮ ಮಟ್ಟದಲ್ಲಿ ಸಂಘಟನೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.










