







ರಾಮಕುಂಜ: ಕೃಷಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕೆರೆಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕೊಯಿಲ ಗ್ರಾಮದ ಏಣಿತ್ತಡ್ಡದಲ್ಲಿ ಜು.18ರಂದು ನಡೆದಿದೆ.


ಏಣಿತ್ತಡ್ಕ ಕಟ್ರ ನಿವಾಸಿ ನವೀನ (40ವ.) ಮೃತಪಟ್ಟವರು. ಇವರು ಬೆಳಗ್ಗೆ ಕೃಷಿ ಕೆಲಸಕ್ಕೆಂದು ತನ್ನ ತೋಟಕ್ಕೆ ಹೋದವರು ಮನೆಗೆ ವಾಪಸ್ಸಾಗದೆ ಇದ್ದಾಗ ಮನೆಯವರು ಹುಡುಕಾಟ ನಡೆಸಿದ್ದು, ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಇವರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಮೃತರ ತಾಯಿ ಸುನಂದ ಅವರು ನೀಡಿದ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ತಾಯಿ, ಪತ್ನಿ ಹಾಗೂ ಎರಡು ತಿಂಗಳ ಗಂಡು ಮಗುವನ್ನು ಅಗಲಿದ್ದಾರೆ.













