







ಪುತ್ತೂರು:ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ೨೦೨೬-೨೭ನೇ ಶೈಕ್ಷಣಿಕ ಸಾಲಿನ ನೂತನ ಪೋಷಕ-ಶಿಕ್ಷಕ ಸಂಘದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.


ಸಂಸ್ಥೆಯ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಇವರು ದೀಪ ಪ್ರಜ್ವಲನೆ ಮಾಡಿ ಪೋಷಕ-ಶಿಕ್ಷಕ ಸಂಘಕ್ಕೆ ಚಾಲನೆ ನೀಡಿದರು.ಪೋಷಕ-ಶಿಕ್ಷಕ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಪೋಷಕರಿಗೆ ಹಾಗೂ ಶಿಕ್ಷಕರಿಗೆ ಅಧ್ಯಕ್ಷರು ಗುಲಾಬಿ ಹೂವನ್ನು ನೀಡುವ ಮೂಲಕ ಅಭಿನಂದಿಸಿ,ಶುಭಹಾರೈಸಿದರು.




ಪೋಷಕ ಶಿಕ್ಷಕ ಸಂಘದ ಅಧ್ಯಕ್ಷ ಸುರೇಶ್ ಪ್ರಭು ಹಾಗೂ ಇತರ ಸದಸ್ಯರು ಸಂಸ್ಥೆಯ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿ,ಸಂಸ್ಥೆಯ ಅಭಿವೃದ್ಧಿಗೆ,ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಪೂರಕವಾಗಿ ಸಲಹೆಗಳನ್ನು ನೀಡಿದರು.ಸಂಸ್ಥೆಯ ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯ,ಕೋಶಾಧಿಕಾರಿ ಹರೀಶ್ ಪುತ್ತೂರಾಯ,ಜತೆ ಕಾರ್ಯದರ್ಶಿ ಸುಬ್ರಾಯ ಬಿ.ಯಸ್.ಉಪಸ್ಥಿತರಿದ್ದರು.
ಶಿಕ್ಷಕರ ಪ್ರತಿನಿಧಿಗಳಾಗಿ ರವಿಶಂಕರ್ ಕೆ.,ಶ್ರೀಮತಿ ನೀತೂ ನಾಯಕ್, ಶ್ರೀಮತಿ ಪ್ರಶಾಂತಿ ಕೆ.,ಮುರಳಿಕೃಷ್ಣ ಪಿ ಇವರು ಉಪಸ್ಥಿತರಿದ್ದರು.ಮುಖ್ಯೋಪಾಧ್ಯಾಯರಾದ ಪ್ರಸನ್ನ ಕೆ ಇವರು ಸ್ವಾಗತಿಸಿ, ಸಹ ಶಿಕ್ಷಕಿ ಶ್ರೀಮತಿ ಪ್ರಶಾಂತಿ ಕೆ ವಂದಿಸಿದರು.ಸಹ ಶಿಕ್ಷಕ ಮುರಳಿಕೃಷ್ಣ ಪಿ ಇವರು ನಿರೂಪಿಸಿದರು.










