ಪುರುಷರಕಟ್ಟೆ: ದೂರುದಾರೆ ಸಹಿತ 6 ಮಂದಿಗೆ ಜಾಮೀನು ಮಂಜೂರು

0

ಪುತ್ತೂರು: ಯುವಕ ಚಾಕು ಹಿಡಿದುಕೊಂಡು ಮುಂದೆ ಹೋದ ಮತ್ತು ತಂಡದ – ಜೊತೆ ವಾಹನವೊಂದರಲ್ಲಿ ತೆರಳಿ ತನ್ನ ಮೇಲೆ ದಾಳಿ ಮಾಡುವ ರೀತಿಯಲ್ಲಿ ಚಾಕು ತೋರಿಸಿ ವಾಹನವೊಂದರಲ್ಲಿ ಹಿಂಬಾಲಿಸಿರುವುದಾಗಿ ಆರೋಪಿಸಿ ಯುವತಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿದ್ದು ಬಳಿಕ ಯುವಕರು ನೀಡಿದ ಪ್ರತಿ ದೂರಿನಂತೆ ಯುವತಿಯ ಸಹಿತ 6 ಮಂದಿಯ ವಿರುದ್ಧ ದಾಖಲಾಗಿದ್ದ ಪ್ರರಕರಣಕ್ಕೆ ಸಂಬಂಧಿಸಿ ಆರು ಮಂದಿಗೂ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.


ಯುವಕರು ನೀಡಿದ ದೂರಿನಂತೆ ನೈಜ ಸಂಗತಿಗಳು ಗೊತ್ತಿದ್ದರೂ ಕೂಡಾ ಧಾರ್ಮಿಕ ದ್ವೇಷಭಾವನೆಯಿಂದ ಸಂಘಟನೆಯೊಂದರಲ್ಲಿ ತೊಡಗಿಸಿಕೊಂಡ ಮುರಳಿಕೃಷ್ಣ ಹಸಂತಡ್ಕ ಮತ್ತು ಇತರರು ತಮ್ಮ ಮೇಲೆ ದುರುದ್ದೇಶಪೂರ್ವಕವಾಗಿ ಯುವತಿಯ ಮೂಲಕ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಯುವಕರು ನೀಡಿದ ದೂರಿನಂತೆ ಪೊಲೀಸರು ಯುವತಿ ವೀಕ್ಷಾ ವಿ.ಎಸ್, ಆಕೆಯ ತಂದೆ ಸಾಂತಪ್ಪ ಗೌಡ, ಹಿಂದೂ ಸಂಘಟನೆಗಳ ಮುಖಂಡ ಮುರಳಿಕೃಷ್ಣ ಹಸಂತಡ್ಕ, ಸಂಬಂಧಿಕ ಪುರುಷೋತ್ತಮ ಗೌಡ ಮುಂಗ್ಲಿಮನೆ, ಜಯರಾಮ ಡಿ., ಆನಂದ ಗೌಡ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರವಾಗಿ ವಕೀಲರಾದ ಮಾಧವ ಪೂಜಾರಿ, ರಾಕೇಶ್ ಬಲ್ನಾಡು ವಾದಿಸಿದರು.

LEAVE A REPLY

Please enter your comment!
Please enter your name here