ಉಪ್ಪಿನಂಗಡಿ: ದಂತ ತಪಾಸಣೆ, ಚಿಕಿತ್ಸಾ ಶಿಬಿರ

0

ಉಪ್ಪಿನಂಗಡಿ: ಜೇಸಿಐ ಉಪ್ಪಿನಂಗಡಿ ಘಟಕ, ಭಾರತೀಯ ದಂತ ವೈದ್ಯಕೀಯ ಸಂಘ ಪುತ್ತೂರು ಉರುವಾಲು ಹವ್ಯಕ ವಲಯ ಹಾಗೂ ಸುದೆಪಿಲ ಫ್ರೆಂಡ್ಸ್ ಮುರ ಮತ್ತು ಬುಳೇರಿಮೊಗ್ರು ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವು ಬುಳೇರಿಮೊಗ್ರು ಶಾಲೆಯಲ್ಲಿ ನಡೆಯಿತು.


ನಿವೃತ್ತ ಮುಖ್ಯ ಶಿಕ್ಷಕ ಗಣೇಶ್ ಐತಾಳ್ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ದಂತ ವೈದ್ಯ ಡಾ. ರಾಜಾರಾಮ ಕೆ.ಬಿ. ಮಾತನಾಡಿ, ಹಲ್ಲುಗಳ ಆರೋಗ್ಯ ರಕ್ಷಣೆ ಕುರಿತು ತಿಳಿಸಿದರು. ಜೇಸಿಐ ಉಪ್ಪಿನಂಗಡಿಯ ಕಾರ್ಯಕ್ರಮ ನಿರ್ದೇಶಕಿ ಜೆ.ಸಿ. ಲವೀನಾ ಪಿಂಟೋ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಭಾರತೀಯ ದಂತ ವೈದ್ಯಕೀಯ ಸಂಘದ ಅಧ್ಯಕ್ಷೆ ಡಾ. ರಮ್ಯಾ ಕಜೆ, ಕೆ.ವಿ.ಜಿ. ದಂತ ವೈದ್ಯಕೀಯ ಮಹಾವಿದ್ಯಾಲಯದ ವಸಡು ಮತ್ತು ಮೂಳೆ ವಿಭಾಗದ ಡಾ.ದಯಾಕರ್ ಎಂ.ಎಂ., ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ವಸಂತ ಗೌಡ, ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪದ್ಮನಾಭ ಗೌಡ, ಜೇಸಿಐ ಉಪ್ಪಿನಂಗಡಿಯ ಪೂರ್ವಾಧ್ಯಕ್ಷ ವಿಜಯಕುಮಾರ್ ಕಲ್ಲಳಿಕೆ, ಹವ್ಯಕ ವಲಯದ ಅಧ್ಯಕ್ಷ ಕೃಷ್ಣ ಭಟ್ ಹತ್ತೊಕ್ಕಲು, ಮುಖ್ಯ ಗುರು ಕರುಣಾಕರ ಎಚ್.ಎನ್. ಉಪಸ್ಥಿತರಿದ್ದರು. ಜೇಸಿಐಯ ಅವನೀಶ್ ಪಿ. ಅಧ್ಯಕ್ಷತೆ ವಹಿಸಿದ್ದರು. ಜೆ ಸಿ ಐ ಉಪ್ಪಿನಂಗಡಿಯ ಕಾರ್ಯಕ್ರಮ ನಿರ್ದೇಶಕಿ ಜೆ ಸಿ ಲವೀನಾ ಪಿಂಟೋ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶಿವರಾಮ್ ಪನ್ಯ ಸ್ವಾಗತಿಸಿದರು. ಶಿಕ್ಷಕಿ ಅಖಿಲಶ್ರೀ ವಂದಿಸಿದರು. ಶಿಕ್ಷಕ ದಯಾನಂದ ಕಾರ್ಯಕ್ರಮ ನಿರ್ವಹಿಸಿದರು.


ಈ ಸಂದರ್ಭ ಸುಮಾರು 140 ಜನರ ದಂತ ತಪಾಸಣೆ ನಡೆಸಲಾಯಿತು. 60 ಮಂದಿಗೆ ಚಿಕಿತ್ಸೆ ನೀಡಲಾಯಿತು. ಕೆ.ವಿ.ಜಿ. ದಂತ ವೈದ್ಯಕೀಯ ಮಹಾವಿದ್ಯಾಲಯದವರು ಶಿಬಿರ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here