







ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮದ ನಿಡ್ಡೆಂಕಿ ಶಿವಚಂದ್ರ ನಿಡ್ಡೆಂಕಿ ಇವರ ಮನೆಯಲ್ಲಿ ಆತ್ಮಗುರು ಸ್ವಸಹಾಯ ಸಂಘದ ಮಹಾಸಭೆ ಮತ್ತು ಆಟಿ ಕೂಟ ನಡೆಯಿತು.
ಗ್ರಾ.ಪಂ. ಮಾಜಿ ಸದಸ್ಯ ಸತೀಶ್ ಶೆಟ್ಟಿ ಹೆನ್ನಾಳ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯರಾದ ಮೋನಪ್ಪ ಸಾಲಿಯಾನ್ ಮತ್ತು ಶಿವಚಂದ್ರ ನಿಡ್ಡೆಂಕಿ ಮತ್ತು ಸಂಘದ ಕಾರ್ಯದರ್ಶಿ ಸುಮಿತ್ರ ನಿಡ್ಡೆಂಕಿ ಉಪಸ್ಥಿತರಿದ್ದರು.


ಈ ಸಂದರ್ಭ ಸಂಘದ ಸದಸ್ಯರಿಗೆ ವಿವಿಧ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು ಹಾಗೂ ಮಧ್ಯಾಹ್ನ ಆಟಿ ತಿಂಗಳ ತಿನಿಸುಗಳನ್ನೊಗೊಂಡ ಭೋಜನ ಕೂಟ ನಡೆಯಿತು.













