







ಪುತ್ತೂರು: ಭಾರತ್ ಸ್ಕೌಟ್, ಗೈಡ್ಸ್ ಮತ್ತು ಸ್ಥಳೀಯ ಸಂಸ್ಥೆಯ ಮಹಾಸಭೆಯು ಜು.21ರಂದು ಪುತ್ತೂರು ಬೊಳುವಾರಿನ ಸ್ಕೌಟಿಂಗ್ ಸೆಂಟರ್‌ನಲ್ಲಿ ನಡೆಯಿತು.
ಭಾರತ್ ಸ್ಕೌಟ್, ಗೈಡ್ಸ್ ಸ್ಥಳಿಯ ಸಂಸ್ಥೆಯ ಜಿಲ್ಲಾ ಆಯುಕ್ತೆ ವಿಮಲಾ ರಂಗಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.






ಇನ್ನೋರ್ವ ಜಿಲ್ಲಾ ಆಯುಕ್ತ ಮಹಮ್ಮದ್ ಕುಂಞಿ ಸ್ಥಳೀಯ ಸಂಸ್ಥೆಯ ಲಾಂಛನ ಬಿಡುಗಡೆಗೊಳಿಸಿದರು. ಜಿಲ್ಲಾ ಕಾರ್ಯದರ್ಶಿ ಪ್ರತಿಮ್ ಕುಮಾರ್, ರಾಜ್ಯ ಸಂಘಟನಾ ಆಯುಕ್ತ ಭರತ್‌ರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೆ ಸಂದರ್ಭ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ಸಂಸ್ಥೆಯ ೪೫ ಮಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸಂಸ್ಥೆಗೆ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಆಸ್ಕರ್ ಆನಂದ್ ಮತ್ತು ವೇವಾವರಿ ಅವರನ್ನು ಗೌರವಿಸಲಾಯಿತು. ಟಿಪಿಒ ಸಿಲ್ವಿಯ ಕ್ಯಾಸ್ಟಿಲಿನೋ ಶುಭ ಹಾರೈಸಿದರು. ಲಾಂಛನ ತಯಾರಿಸಿದ ಚಂದ್ರಾಕ್ಷ ಅವರನ್ನು ಅಭಿನಂದಿಸಲಾಯಿತು. ಪ್ರಫುಲ್ಲಾ ವರದಿ ವಾಚಿಸಿದರು. ಸುನಿತಾ ಲೆಕ್ಕಪತ್ರ ಮತ್ತು ಬಜೆಟ್ ಮಂಡಿಸಿದರು. ಸ್ಥಳೀಯ ಸಂಸ್ಥೆಗಳ ಕಾರ್ಯದರ್ಶಿ ವಿದ್ಯಾಗೌರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ವೇದಾವತಿ ವಂದಿಸಿದರು. ಮಧ್ಯಾಹ್ನದ ಬಳಿಕ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್‌ರಾಜ್ ಕೆ ಅವರಿಂದ ಯುಐಡಿಯ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.









