







ಪುತ್ತೂರು : ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 44ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಿಸುವ ಬಗ್ಗೆ ಪೂರ್ವಬಾವಿ ಸಭೆಯು ಸವಣೂರು ವಿನಾಯಕ ಸಭಾಭವನದಲ್ಲಿ ಜು. 24 ರಂದು ಜರಗಿತು.



ಸಮಿತಿಯ ಗೌರವಧ್ಯಕ್ಷ ಸವಣೂರು ಸೀತಾರಾಮ ರೈ ಯವರ ಮಾತನಾಡಿ ಕಳೆದ ಬಾರಿಯ 43 ನೇ ವರ್ಷದ ಗಣೇಶೋತ್ಸವವು ಎಲ್ಲರ ಸಹಕಾರದೊಂದಿಗೆ ಬಹಳ ವಿಜೃಂಭಣೆಯಿಂದ ನಡೆದಿದ್ದು, ಈ ಬಾರಿಯೂ ಅದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಉತ್ತಮವಾಗಿ ನಡೆಯಲಿ ಎಂದು ಶುಭ ಹಾರೈಸಿದರು.ಸಮಿತಿಯ ಅಧ್ಯಕ್ಷ ಪ್ರಭಾಕರ ಶೆಟ್ಟಿ ನಡುಬೈಲುರವರು ಮಾತನಾಡಿ ಈ ವರ್ಷ ನಡೆಯುವ ಗಣೇಶೋತ್ಸವ ಕಾರ್ಯಕ್ರಮವು ಬಹಳ ಯಶಸ್ವಿಯಾಗಿ ನಡೆಯುವಂತೆ ಎಲ್ಲಾರ ಸಹಕಾರ ಕೋರಿದರು.




ವೇದಿಕೆಯಲ್ಲಿ ಸವಣೂರಿನ ಉದ್ಯಮಿ, ಗಣೇಶೋತ್ಸವದ ಮಹಾ ಪೋಷಕ ಎನ್ ಸುಂದರ ರೈ ಸವಣೂರು, ಸಮಿತಿಯ ಮಾಜಿ ಅಧ್ಯಕ್ಷ ಶಿವರಾಮ ಗೌಡ ಮೆದು, ಕಡಬ ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಪಿ ಸಮಿತಿಯ ಉಪಾಧ್ಯಕ್ಷರಾದ ಬಾಲಚಂದ್ರ ರೈ ಕೆರೆಕೋಡಿ, ರಾಘವ ಗೌಡ ಸವಣೂರು, ಕೋಶಾಧಿಕಾರಿ ರಾಮಕೃಷ್ಣ ಪ್ರಭು, ಮೋಹನ್ ರೈ ಕೆರೆಕೋಡಿ, ದಿವಾಕರ ಬಸ್ತಿ, ಕುಂಞ್ಞ ಅರೆಲ್ತಾಡಿ, ಅನಿತಾ ಲಕ್ಷ್ಮಣ ಕೆಡೆಂಜಿ ಚಂದ್ರಾವತಿ ಸುಣ್ಣಾಜೆ, ವೇದಾವತಿ ಬೇರಿಕೆ, ಚಂದ್ರಾವತಿ ಚಾಪಲ್ಲ, ಶಾರದಾಂಬ ಸೇವಾ ಸಂಘದ ವಸಂತ ರೈ ಸೊರಕೆ, ಸಂಪತ್ ಕುಮಾರ್ ಇಂದ್ರ, ಜಯರಾಮ ರೈ ಮೂಡಂಬೈಲು, ರಾಜೇಂದ್ರ ಇಡ್ಯಾಡಿ, ಸಚಿನ್ ಸವಣೂರು, ರಾಜ್ ದೀಪಕ್ ಶೆಟ್ಟಿ ಮಠ, ಕುಲಪ್ರಕಾಶ್ ಮೆದು, ಉಮೇಶ್ ಬೇರಿಕೆ ಸವಣೂರು, ಶೈಲೇಶ್ ಭಂಡಾರಿ, ಪುಟ್ಟಣ್ಣ ಬಂಬಿಲ, ಜೀವನ್ ಸವಣೂರು ಕುಮಾರಾಧಾರ ಆಟೋ ಚಾಲಕ ಮಾಲಕ ಸಂಘದ ಅಂಗಾರ ಬೇರಿಕೆ ಉಪಸ್ಥಿತರಿದ್ದರು.ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಬಲ್ಯಾಯ ಸ್ವಾಗತಿಸಿ, ಸಮಿತಿಯ ಜೊತೆ ಕಾರ್ಯದರ್ಶಿ ಚೇತನ್ ಕುಮಾರ್ ಕೋಡಿಬೈಲು ವಂದಿಸಿದರು.










