







ಪುತ್ತೂರು ತಾಲ್ಲೂಕು ಮೊಗೇರ ಸಂಘದ ಹಿರಿಯ ಮುಖಂಡ, ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ, ಅಬಕಾರಿ ಇಲಾಖೆಯ ನಿವೃತ ಉಪ ನಿರೀಕ್ಷಕ ಅಂಗಾರ ಹಾರಡಿ ಜು. 23ರಂದು ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಮಧ್ಯ ರಾತ್ರಿ ನಿಧನರಾಗಿದ್ದು, ಮೃತರ ಅಂತಿಮ ವಿಧಿ ವಿಧಾನ ಹಾರಡಿಯಲ್ಲಿರುವ ಸ್ವಗೃಹದಲ್ಲಿ ಜು. 24ರಂದು ನಡೆದು ಮಧ್ಯಾಹ್ನ ನಂತರ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮಡಿವಾಳ ಕಟ್ಟೆಯಲ್ಲಿರುವ ಹಿಂದೂರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.


ಅಂಗಾರ ಹಾರಡಿಯವರ ನಿಧನಕ್ಕೆ ಕರ್ನಾಟಕ ರಾಜ್ಯ ಮೊಗೇರ ಸಂಘ ಮತ್ತು ಪುತ್ತೂರು ತಾಲ್ಲೂಕು ಮೊಗೇರ ಸಂಘ ತೀವ್ರ ಶೋಕ ವ್ಯಕ್ತಪಡಿಸಿದ್ದು. ಅಗಲಿದ ನಾಯಕನಿಗೆ ಗೌರವ ನಮನ ಸಲ್ಲಿಸಿದೆ.
ಕರ್ನಾಟಕ ರಾಜ್ಯ ಮೊಗೇರ ಸಂಘದ ಅಧ್ಯಕ್ಷ ನಂದರಾಜ್ ಸಂಕೇಶ್, ಪ್ರಧಾನ ಕಾರ್ಯದರ್ಶಿ ಚಿತ್ತಾರಂಜನ್ ದಾಸ್,ಬಾಬು ಮಾಸ್ಟರ್ ತೆಗ್ಗು, ಅಶೋಕ್ ಕೊಂಚಾಡಿ, ಪುತ್ತೂರು ತಾಲ್ಲೂಕು ಮೊಗೇರ ಸಂಘದ ಅಧ್ಯಕ್ಷ ಸುಂದರ ಕೇಪುಳ್ , ಪ್ರಧಾನ ಕಾರ್ಯದರ್ಶಿ ಮುಖೇಶ್, ಕೇಮ್ಮಿಂಜೆ ಯುವ ವೇದಿಕೆ ಅಧ್ಯಕ್ಷ ಶರತ್ ಕೆ, ವಿ ಸುಳ್ಯ ತಾಲ್ಲೂಕು ಮೊಗೇರ ಸಂಘದ ಅಧ್ಯಕ್ಷ ಕರುಣಾಕರ, ಮೊಗೇರ ಸಂಘದ ಪ್ರಮುಖ ಲೋಕೇಶ್ ಎಂ, ಹೆಚ್. ಧನಂಜಯ ಕಬಕ, ಸುಂದರ ಕಜೆ ಬೆಳ್ಳಿಪ್ಪಾಡಿ ಚಂದ್ರ ಬೀರಿಗ ಸವಿತಾ ಈಶ್ವರ ಮಂಗಳ ಹಾಗೂ ಪುಷ್ಪಾ ಮುಕ್ವೇ ಸೇರಿದಂತೆ ಹಲವು ಮುಖಂಡರು ಮೃತರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.ಮಂಗಳೂರು ಮೊಗೇರ ಸಂಘದ ಅಧ್ಯಕ್ಷ ಸೀತಾರಾಮ ಕೊಂಚಾಡಿ ಹಾಗೂ ಇತರ ಅನೇಕ ಗಣ್ಯರು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.













