ಕುಂಬಳೆ:ಮನೆ ದರೋಡೆ ಪ್ರಕರಣ: ಪ್ರಮುಖ ಆರೋಪಿ ಸಂಪ್ಯದಲ್ಲಿ ಬಂಧನ

0

ಪುತ್ತೂರು:15 ವರ್ಷಗಳ ಹಿಂದೆ ಕುಂಬಳೆಯಲ್ಲಿ ನಡೆದಿದ್ದ ಮನೆದರೋಡೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯೊಬ್ಬನನ್ನು ಸಂಪ್ಯದಲ್ಲಿ ಪೊಲೀಸರು ಬಂಧಿಸಿದ್ದಾರೆ.
15 ವರ್ಷಗಳ ಹಿಂದೆ ಕುಂಬ್ಳೆಯಲ್ಲಿ ಅನಿಲ್ ಕುಂಬ್ಳೆ ರಸ್ತೆ ಸಮೀಪದ ಮನೆಯೊಂದಕ್ಕೆ ನುಗ್ಗಿದ ದರೋಡೆಕೋರರ ತಂಡ,ಕುಟುಂಬದ ಸದಸ್ಯರನ್ನು ಕಟ್ಟಿಹಾಕಿ 42 ಪವನ್ ಚಿನ್ನಾಭರಣ ಹಾಗೂ 25,೦೦೦ ರೂ.ನಗದು ದರೋಡೆ ಮಾಡಿ ಪರಾರಿಯಾಗಿತ್ತು.ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಂಪ್ಯ ನಿವಾಸಿ ಅಸೀಸ್ ಅಲಿಯಾಸ್ ಅಬ್ದುಲ್ ಅಸೀಸ್ (58ವ.)ಎಂಬಾತನನ್ನು ಕುಂಬ್ಳೆ ಪೊಲೀಸರು ಸಂಪ್ಯದಲ್ಲಿ ಬಂಽಸಿದ್ದಾರೆ.ಕಾಸರಗೋಡು ಅಪರಾಧ ವಿಭಾಗದ ಡಿವೈಎಸ್ಪಿ ಮಧುಸೂದನ್ ನಾಯರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್‌ಗಳಾದ ಶ್ರೀಕುಮಾರ್, ಸಂಜಯ್, ಎಸ್‌ಐಗಳಾದ ರವೀಂದ್ರನ್, ಪ್ರಮೋದ್, ವಿನೋದ್ ಹಾಗೂ ಸಿಬ್ಬಂದಿಗಳಾದ ಗೋಪನ್, ರಾಜೀವನ್, ರಾಜೇಶ್ ಮಡಿಕೈ ಮತ್ತು ಚಾಲಕ ರಂಜಿತ್ ಪಾಲ್ಗೊಂಡಿದ್ದರು.


ಘಟನೆಯ ವಿವರ:
ಡಿಸೆಂಬರ್ 22,2012ರಂದು ರಾತ್ರಿ ಮಂಗಳೂರಿನ ಸಾರಿಗೆ ನಿರ್ವಾಹಕ ರಾಜೇಶ್ ಶೆಣೈ ಅವರ ಕುಂಬಳೆಯ ಮನೆಗೆ ಮುಸುಕುಧಾರಿಗಳ ತಂಡವೊಂದು ಬಾಗಿಲು ಒಡೆದು ಅಕ್ರಮವಾಗಿ ಪ್ರವೇಶಿಸಿತ್ತು.ಗ್ಯಾಂಗ್‌ನ ಸದಸ್ಯರು ಬಂದೂಕು ತೋರಿಸಿ ಕುಟುಂಬವನ್ನು ಒತ್ತೆಯಾಳಾಗಿ ಇರಿಸಿಕೊಂಡು ಹಣ-ಚಿನ್ನಕ್ಕೆ ಬೇಡಿಕೆಯಿಟ್ಟಿದ್ದರು.ರಾಜೇಶ್ ಶೆಣೈ ಅವರು ಹಣವಿಲ್ಲ ಎಂದಾಗ, ಅವರ ಮುಖಕ್ಕೆ ದ್ರವವೊಂದನ್ನು ಸಿಂಪಡಿಸಿ ಪ್ರಜ್ಞೆ ತಪ್ಪುವಂತೆ ಮಾಡಿದ್ದರು.ನಂತರ ಕುಟುಂಬದ ಸದಸ್ಯರ ಕೈಗಳನ್ನು ಬೆನ್ನಹಿಂದೆ ಕಟ್ಟಿ,ಬಾಯಿಗೆ ಪ್ಲಾಸ್ಟರ್ ಹಾಕಿ, ಅವರು ಧರಿಸಿದ್ದ ಆಭರಣ ಹಾಗೂ ಕಪಾಟಿನಲ್ಲಿದ್ದ ಹಣವನ್ನು ದೋಚಿ ತಂಡ ಪರಾರಿಯಾಗಿತ್ತು.ರಾತ್ರಿ ರಾಜೇಶ್ ಶೆಣೈ ಅವರ ಕುಟುಂಬ ಸ್ನೇಹಿತೆ ಡಾ.ವಾಣಿ ಅವರು ಗೃಹಪ್ರವೇಶಕ್ಕೆ ಆಹ್ವಾನಿಸಲೆಂದು ರಾಜೇಶ್ ಶೆಣೈ ಅವರ ಮನೆಗೆ ಹೋಗಿದ್ದಾಗ ಪ್ರಕರಣ ಬೆಳಕಿಗೆ ಬಂದಿತ್ತು.ಪ್ರಕರಣಕ್ಕೆ ಸಂಬಂಽಸಿದಂತೆ ಈ ಹಿಂದೆ 10 ಆರೋಪಿಗಳನ್ನು ಬಂಧಿಸಲಾಗಿತ್ತು.ತಲೆಮರೆಸಿಕೊಂಡಿದ್ದ ನಾಲ್ವರಲ್ಲಿ ಪ್ರಮುಖ ಆರೋಪಿ ಅಸೀಸ್ ಯಾನೆ ಅಬ್ದುಲ್ ಅಸೀಸ್ ಇದೀಗ ಬಂಧಿತನಾಗಿದ್ದಾನೆ.ಇನ್ನುಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಕುಂಬಳೆ ಅಪರಾಧ ವಿಭಾಗದ ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here