







ಆಲಂಕಾರು: ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಕಡಬ ತಾಲೂಕು ಘಟಕ ಆಲಂಕಾರು ವತಿಯಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಸಹಕಾರ್ಯದರ್ಶಿಯಾಗಿ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದ ದಿವಂಗತ ಶ್ರೀ ರವಿಚಂದ್ರ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಭೆ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಾಜಗೋಪುರ ಸಭಾಂಗಣದಲ್ಲಿ ನಡೆಯಿತು.



ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.), ಕಡಬ ತಾಲೂಕು ಘಟಕದ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆಗುತ್ತು ರವರು ಮಾತನಾಡಿ ರವಿಚಂದ್ರ ಶೆಟ್ಟಿಯವರು ಯಕ್ಷಧ್ರುವ ಪಟ್ಲ ಫೌಂಡೇಶನ್ನ ನಿಷ್ಠಾವಂತ ಕಾರ್ಯಕರ್ತರಷ್ಟೇ ಅಲ್ಲ, ಯಕ್ಷಗಾನ, ಸಂಸ್ಕೃತಿ ಹಾಗೂ ಸಮಾಜಮುಖಿ ಕಾರ್ಯಗಳಿಗೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡ ಅಪರೂಪದ ವ್ಯಕ್ತಿತ್ವದವರು, ಅವರ ಅಗಲಿಕೆ ಫೌಂಡೇಶನ್ಗೆ ತುಂಬಲಾರದ ನಷ್ಟವಾಗಿದೆ. ಅವರು ತೋರಿದ ಸೇವೆಯ ಹಾದಿ ಹಾಗೂ ಮೌಲ್ಯಗಳನ್ನು ಮುಂದುವರಿಸಿಕೊಂಡು ಹೋಗುವುದೇ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ತಿಳಿಸಿದರು.



ಸಂಚಾಲಕರಾದ ಡಾ. ಹೇಮಂತ ರೈ ಮನವಳಿಕೆಗುತ್ತು ಮಾತನಾಡಿ, “ರವಿಚಂದ್ರ ಶೆಟ್ಟಿಯವರ ಸರಳತೆ, ಸಂಘಟನಾ ಸಾಮರ್ಥ್ಯ ಹಾಗೂ ಎಲ್ಲರನ್ನು ಆತ್ಮೀಯವಾಗಿ ಒಗ್ಗೂಡಿಸುವ ಗುಣ ಸದಾ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ಭಗವಂತನು ದಿವಂಗತ ಶ್ರೀ ರವಿಚಂದ್ರ ಶೆಟ್ಟಿಯವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವರ ಕುಟುಂಬದವರಿಗೆ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ, ಧೈರ್ಯ ಮತ್ತು ಸಾಂತ್ವನವನ್ನು ನೀಡಲಿ ಎಂದು ಪ್ರಾರ್ಥಿಸಿದರು.
ಸಭೆಯಲ್ಲಿ ಎರಡು ನಿಮಿಷಗಳ ಮೌನ ಪ್ರಾರ್ಥನೆ ಸಲ್ಲಿಸಿ ದಿವಂಗತ ರವಿಶೆಟ್ಟಿಯವರ ಅತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸಲಾಯಿತು. ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ನ ಕಡಬ ತಾಲೂಕು ಘಟಕದ ಪದಾಧಿಕಾರಿಗಳು, ಮತ್ತು ಸದಸ್ಯರುಗಳಾದ ಸುಬ್ರಹ್ಮಣ್ಯ ರಾವ್.ಕೆ,ವಿಶ್ರಾಂತ ಪ್ರಾಂಶುಪಾಲರಾದ ವಿಠಲ ರೈ ಕೊಣಾಲುಗುತ್ತು,ರಾಧಾಕೃಷ್ಣ ರೈ ಪರಾರಿಗುತ್ತು,ಎಸ್.ವಿ ಪ್ರಸಾದ್ ಕಣಿಪುರ,
ಮಮತಾ ಶೆಟ್ಟಿ ಅಂಬರಾಜೆ, ದಾಮೋದರ ಆಚಾರ್ಯ ಆಲಂಕಾರು, ಗಣೇಶ ಹಿರಿಂಜ, ಸೇಸಪ್ಪ ಪೂಜಾರಿ ನೆಕ್ಕಿಲಾಡಿ, ಪುರಂದರ ರೈ ಸಬಳೂರು, ನಿವೃತ್ತ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ
ಜಗನ್ನಾಥ ಶೆಟ್ಟಿ.ಎ, ಸುಶೀಲ ಕೊಂಡಾಡಿ ಸೇರಿದಂತೆ ಯಕ್ಷಗಾನ ಅಭಿಮಾನಿಗಳು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.










