







ಕಾಣಿಯೂರು: ಸುಮಾರು 52 ವರ್ಷಗಳಿಂದ ಕೊಡಿಯಾಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಕೊಡಿಯಾಲ ಕಲ್ಲುಗದ್ದೆ ಇದರ ಆಶ್ರಯದಲ್ಲಿ ಕ್ರೀಡಾ ಸಾಧಕ, ಕೊಡಿಯಾಲ ಕಲ್ಪಡ ನಮ್ಮೂರು ನಮ್ಮ ಕನಸು ಜನಸೇನಾ ಟ್ರಸ್ಟ್ ನ ಅಧ್ಯಕ್ಷ ಸುಬ್ರಹ್ಮಣ್ಯ ಕೆ.ಎಂ ಕಲ್ಪಡ, ಮತ್ತು ಭಜನಾ ತರಬೇತುದಾರ ರಾಮಕೃಷ್ಣ ಕಾಟುಕುಕ್ಕೆಯವರನ್ನು ಸನ್ಮಾನಿಸಲಾಯಿತು.


ಭಜನಾ ಮಂಡಳಿ ಅಧ್ಯಕ್ಷ ಬಾಚೋಡಿ ವೆಂಕಟೇಶ್ ಪೈ ಕೊಡಿಯಾಲ ಅತಿಥಿಗಳನ್ನು ಬರಮಾಡಿಕೊಂಡರು. ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ ಸಾಧಕರನ್ನು ಸನ್ಮಾನಿಸಿದರು. ಭಜನಾ ಮಂಡಳಿ ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.













