






ಪುತ್ತೂರು: ಜುಲೈ 14ರಂದು ನಿಧನರಾದ ಏಳ್ಮುಡಿ ಮೂಲದ, ಬನ್ನೂರು ಜೈನರಗುರಿ ನಿವಾಸಿ ಪಾಂಡುರಂಗ ಆಚಾರ್ಯ ಅವರ ಪತ್ನಿ ಶ್ರೀಮತಿ ಪುಷ್ಪಲತಾ ಆಚಾರ್ಯ ಅವರ ಉತ್ತರಕ್ರಿಯೆ ಜುಲೈ 26ರಂದು ಪುತ್ತೂರಿನ ಶ್ರೀ ಮಹಾಮಾಯಾ ಸೇವಾಸದನದಲ್ಲಿ ಪುರೋಹಿತ ವಾಸು ಆಚಾರ್ಯ ಅವರ ನೇತೃತ್ವದಲ್ಲಿ ನೆರವೇರಿತು.


ಈ ಸಂದರ್ಭದಲ್ಲಿ ಪುರೋಹಿತ ವಾಸು ಆಚಾರ್ಯ ಹಾಗೂ ಸಂಜಯ್ ಆಚಾರ್ಯ (ಬಂದ್ಯೋಡ್, ಸುರತ್ಕಲ್) ಅವರು ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ವ್ಯಕ್ತಿತ್ವ ಹಾಗೂ ಸತ್ಕಾರ್ಯಗಳನ್ನು ಸ್ಮರಿಸಿ ನುಡಿನಮನ ಅರ್ಪಿಸಿದರು.



ಕುಟುಂಬಸ್ಥರು, ಬಂಧು-ಬಳಗ, ಹಿತೈಷಿಗಳು ಹಾಗೂಆತ್ಮೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಪುಷ್ಪಲತಾ ಆಚಾರ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.ಕಾರ್ಯಕ್ರಮದಲ್ಲಿ ಮೃತರ ಪತಿ ಪಾಂಡುರಂಗ ಆಚಾರ್ಯ, ಮಕ್ಕಳಾದ ಮಹೇಶ್ ಆಚಾರ್ಯ, ಮಂಗಳ ಮಧುಕೇಶವ ಆಚಾರ್ಯ, ತುಳಸಿ ಆಚಾರ್ಯ ಸೇರಿದಂತೆ ಸಹೋದರರು, ಸಹೋದರಿಯರು ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.










